ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರು:
ಕಿತ್ತೂರು ರಾಣಿ ಚನ್ನಮ್ಮನ ಉತ್ಸವದ ನಿಮಿತ್ತ ಕೊನೆಯ ದಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜನಪದ, ಯೋಗ ಪ್ರದರ್ಶನ, ಗೀಗೀ ಪದ, ಸಮೂಹ ನೃತ್ಯ, ಹಾಗೂ ವಿಜಯ ಪ್ರಕಾಶ ತಂಡದವರ ಸಂಗೀತ ಸಂಜೆ ವಾಧ್ಯಗಳ ನಿನಾದ ಮುಗಿಲು ಮುಟ್ಟಿತು, ಈ ಎಲ್ಲ ಕಾರ್ರಕ್ರಮಗಳ ನಡುವೆ ವರ್ಷರಾಜನ ಆರ್ಭಟ ಮುಂದು ವರೆದಿದ್ದರು ಪ್ರೇಕ್ಷಕರು ವಾಧ್ಯ ಸಂಗೀತಕ್ಕೆ ಕುಳಿತ ಸ್ಥಳದಲ್ಲಿಯೇ ಜನರು ಹುಚ್ಚೆದು ಕುಣಿದು ಕುಪ್ಪಳಿಸಿದರು.
ಬೆಂಗಳೂರು ಜೈ ಹೋ ಖ್ಯಾತೆಯ ಹಿನ್ನಲೆ ಗಾಯಕ ವಿಜಯ ಪ್ರಕಾಶ ತಂಡ ರಸಮಂಜರಿ ಕಾರ್ಯಕ್ರಮದಲ್ಲಿ ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ, ಗೊಂಬೆ ಹೇಳತೈತೆ ಮತ್ತೆ ಹೇಳತೈತೆ ನೀನೆ ರಾಜಕುಮಾರ, ಕಣ್ಣು ಹೊಡೆಯಾಕ ಮೊನ್ನೆ ಕಲತೇನಿ ನಿನ್ನ ನೋಡಿ ಸುಮನೆಂಗರಿಲಿ ಎಂಬ ಹಾಡಿಗೆ ಪ್ರೇಕ್ಷಕರು ಕೆಸರಿನಲ್ಲಿ ಕುಣಿದು ಸೀಳ್ಳೆಗಳ ಸುರಿಮಳೆ ಸುರಿಸಿದರು. ವಿಜಯ ಪ್ರಕಾಶ ತಂಡದ ಸಂಗಡಿಗರು ಹಾಡಿದ ಉತ್ತರ ಕರ್ನಾಟಕದ ಜನ ಮೆಚ್ಚಿದ ಹಾಡು ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು, ಎಂಬ ಭಾಷಾ ಭಕ್ತಿ ಹಾಡಿಗೆ ಹಳ್ಳಿಯಿಂದ ಬಂದ ಜನರು ತಮ್ಮ ಹೆಗಲ ಮೇಲಿರುವ ಹಸಿರು ವಸ್ತçವನ್ನ ತಿರುಗಾಡಿಸುತ್ತ ವಿಜಯ ಪ್ರಕಾಶಗೆ ಜೈ ಎಂದು ಕೂಗಾಡಿದರು.
ತಡ ರಾತ್ರಿ ವಿಜಯ ಪ್ರಕಾಶ ಹಾಡಿದ ಉಳ್ಳವರು ಶಿವಾಲಯ ಮಾಡುವರಯ್ಯ ನಾನೇನು ಮಾಡಲಿ ಬಡವನಯ್ಯ ಮತ್ತು ತರವಲ್ಲ ತಂಗಿ ನಿನ್ನ ತಂಬೂರಿ ಸ್ವರ ಬರದೆ ಬರಸದಿರು ತಂಬೂರಿ ಎಂಬ ಹಾಡಿಗೆ ಕಲಾವಿದರು ಹಾಕಿದ ಸ್ಟೇಪ್ ಜನರ ಮನ ಮುಟ್ಟಿದವು.
ಹಲಗೆ, ಜಗ್ಗಲಿಗೆ ಡೊಳ್ಳು ಕುಣಿತ, ವೀರಗಾಸೆ, ನಂದಿ ಕೋಲು ನೃತ್ಯ, ಮಾರಮ್ಮನ ಕುಣಿತ ಸೇರಿದ ಪ್ರೇಕ್ಷಕರೆಲ್ಲರು ನಾದಕ್ಕೆ ತಕ್ಕಂತೆ ಕುಳಿತ ಜಾಗದಲ್ಲಿಯೇ ನೃತ್ಯ ಮಾಡಿದರು.
ಕಿತ್ತೂರಿನ ಹುಡುಗಿ ಖುಷಿ ಕುಪ್ಪಸಗೌಡ್ರ ಸಂತ ಶಿಶುನಾಳ ಶರೀಪರ ಎಂತಾ ಮೋಜಿನ ಕುದುರಿ ಹತ್ತಿದ ಮೇಲೆ ತಿರುಗುವುದು ಹನ್ನೊಂದು ಕೇರಿ ಎಂಬ ಮಾಡರ್ನ ಹಾಡಿಗೆ ಯುವಕರು ಕುಣಿದು ಕುಪ್ಪಳಿಸಿ ಕೇಕೆ ಹಾಕಿದರು.
ಈ ವೇಳೆ ಎಲ್ಲ ಕಲಾ ತಂಡಗಳಿಗೆ ಹಾಗೂ ಕಿತ್ತೂರು ಉತ್ಸವ ಪ್ರಾರಂಭ ಮಾಡಿದ ಕಿತ್ತೂರ ನಾಡಿನ ಗಣ್ಯರನ್ನ ಶಾಸಕ ಮಾಹಾಂತೇಶ ದೊಡಗೌಡರ, ಬೆಳಗಾವಿ ಜಿಲ್ಲಾಧಿಕಾರಿ ಎಮ್. ಜಿ. ಹೆರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನರ‍್ದೇಶಕಿ ವಿಧ್ಯಾವತಿ ಭಜಂತ್ರಿ ಬೈಲಹೊಂಗಲ ಉಪವಿಭಾಗಾಧಿಕಾರಿ ಶಶಿಧರ ಬಗಲಿ, ಕಿತ್ತೂರು ತಹಶಿಲ್ದಾರ ಸೋಮಲಿಂಗ ಹಾಲಗಿ ಇನ್ನು ಅನೇಕ ಗಣ್ಯರು ಭಾಗವಹಿಸಿದ ಕಲಾವಿದರಿಗೆ ಸ್ಮರಿಣಿಕೆ ಹಾಗು ಪ್ರಮಾಣ ಪತ್ರ ನೀಡಿ ಗೌರವಿಸಿದರು.