ಬೆಂಗಳೂರು(ಅ.25): ತನ್ನದೇಯಾದ ವಿಭಿನ್ನ ರುಚಿ ಹಾಗೂ ತುರ್ತು ಸರಬರಾಜು ಮೂಲಕ ಅಸಂಖ್ಯಾತ ಗ್ರಾಹಕರನ್ನು ಸೃಷ್ಠಿಸಿಕೊಂಡಿರುವ ಪ್ರತಿಷ್ಠಿತ ಕೆ.ಎಫ್.ಸಿ ಚಿಕನ್ ಮಳಿಗೆಗಳಲ್ಲಿ ಹಾಗೂ ಮಳಿಗೆಗಳ ಇಂಗ್ಲೀಷ್ ನಾಮಫಲಕ ಮತ್ತು ಅಲ್ಲಿನ ಸಿಬ್ಬಂದಿಗಳು ಕನ್ನಡ ಬಳಸದೇ ಇರುವುದನ್ನು ಖಂಡಿಸಿ ಕನ್ನಡಿಗರು ಕೆ.ಎಫ್.ಸಿ ಚಿಕನ್ ವಿರೋಧಿಸಿ ಟ್ವಿಟ್ಟರ್ ಅಭಿಯಾನಕ್ಕೆ ಮುಂದಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದು ಮಾಡುತ್ತಿದೆ.
ಕನ್ನಡಕ್ಕಾಗಿ ನಾವು ವಿಶಿಷ್ಠ ಅಭಿಯಾನ ರೂಪಿಸಲಾದ ಕರ್ನಾಟಕ ಸರ್ಕಾರದ ಈ ಸಂದರ್ಭದಲ್ಲಿ ಕನ್ನಡವನ್ನು ತಿರಸ್ಕರಿಸಿದ ಕೆ.ಎಫ್. ಸಿ ವಿರುದ್ದ ಕನ್ನಡಿಗರು ಬಂಡೆದ್ದಿದ್ದು ಫುಲ್ ಸೌಂಡ್ ಮಾಡುತ್ತಿದೆ.