ಚನ್ನಮ್ಮನ ಕಿತ್ತೂರು: ಕಿತ್ತೂರು ಕೋಟೆ ಆವರಣದಲ್ಲಿ ಎರಡು ದಿನಗಳ ಕಾಲ ನಡೆಯುವ ರಾಣಿ ಚನ್ನಮ್ಮನ ಉತ್ಸವದ ಮೊದಲ ದಿನ ಉತ್ಸವವನ್ನು ಉದ್ಘಾಟಿಸಿ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮಿಗಳು ಮಾತನಾಡಿ ಈ ಉತ್ಸವದಲ್ಲಿ ಭಾಗಿಯಾಗುವುದೇ ಒಂದು ಸಂಭ್ರಮ ಇಂತ ಉತ್ಸವದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದು ಅತ್ಯಂತ ಸಂತೋಷದ ಸಂಗತಿ.
ಚನ್ನಮ್ಮನ ಐಕ್ಯಸ್ಥಳದ ಅಭಿವೃದ್ದಿಗೆ ಹಾಗೂ ಇತಿಹಾಸದ ಪರಂಪರೆಯ ಉಳಿವಿಗೆ ಹಾಗೂ ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಲು 2018 ರಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಬಸವರಾಜ ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಿ ಈ ಎಲ್ಲ ಬೇಡಿಕೆ ಈಡೇರಿದ್ದು ನಿಜಕ್ಕೂ ಅಭಿಮಾನದ ಸಂಗತಿಯಾಗಿದೆ.
ಈ ಕಿತ್ತೂರು ಯಾವಾಗಲೋ ಅಭಿವೃದ್ದಿ ಆಗಬೇಕಿತ್ತು ಮಹಾತ್ಮ ಗಾಂಧೀಜಿಯವರನ್ನು ಈ ದೇಶದ ಮಹಾತ್ಮ ಅಂತ ಘೋಷಿಸಿದ ಮಾದರಿಯಲ್ಲೇ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಕಿತ್ತೂರು ಸಂಗ್ರಾಮವನ್ನಾಗಿ ಘೋಷಿಸಬೇಕು ಚನ್ನಮ್ಮಾಜಿಯವರ ಹೋರಾಟದ ಹಿನ್ನೆಲೆಯಲ್ಲಿ ಮರಣೋತ್ತರವಾಗಿ ಭಾರತರತ್ನ ಪುರಸ್ಕಾರ ನೀಡಬೇಕು ಅನ್ನೋ ಬೇಡಿಕೆ ನಮ್ಮದು.
ಈ ಹಿನ್ನೆಲೆಯಲ್ಲಿ ದೇಹಲಿವರೆಗೂ ರಾಣಿ ಚನ್ನಮ್ಮ ಅವರ ಹೋರಾಟದ ದಿಟ್ಟ ಇತಿಹಾಸ ತಲುಪಬೇಕಿದೆ. ಹೇಗೆ ಝಾನ್ಸಿಯಲ್ಲಿ ಮೊದಲು ಕೃಷಿ ಅಧ್ಯಯನ ಪೀಠ ಸ್ಥಾಪಿಸಲಾಗಿದೆ ಇಂದು ಅಲ್ಲಿಗೆ ದೇಶದ ನಾನಾ ಮೂಲೆಗಳಿಂದ ರೈತರು ಝಾನ್ಸಿಗೆ ಹೋಗುತ್ತಾರೆ ಅದೆ ಮಾದರಿಯಲ್ಲಿ ರಾಣಿ ಚನ್ನಮ್ಮನ ಹೆಸರಿನಲ್ಲಿ ಎರಡನೇ ಕೃಷಿ ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು ದೇಶದ ಮೂಲೆ ಮೂಲೆಯಿಂದ ಜನರು ಕಿತ್ತೂರಿನತ್ತ ಹರಿದು ಬರುವಂತಾಗಬೇಕು ಎಂದು ಹೇಳಿದರು.