ಸೂರ್ಯ ಮುಳಗದ ಸಾಮ್ರಾಜ್ಯವನ್ನು ಅಸ್ಥಂಗತ ಆಗುವಂತೆ ಮಾಡಿರುವದು ಕಿತ್ತೂರು ಸಂಸ್ಥಾನದ ಮೇರು ಸಾಧನೆ

ಉಮೇಶ ಗೌರಿ (ಯರಡಾಲ)

ಧಾರವಾಡ ಮತ್ತು ಬೆಳಗಾವಿ ಮಹಾ ನಗರಗಳ ಮಧ್ಯ ಮಲೆನಾಡಿನ ಅಂಚಿನಲ್ಲಿ ಪೂಣಾ ಬೆಂಗಳೂರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಇರುವ ಕಿತ್ತೂರು ಸಂಸ್ಥಾನ 240 ವರ್ಷಗಳ ಮಹೋನ್ನತ ಇತಿಹಾಸ ಹೊಂದಿದ ಆರ್ಥಿಕವಾಗಿ ಸಾಹಿತ್ಯಿಕವಾಗಿ ರಾಜಕೀಯವಾಗಿ ವೈಭವವನ್ನು ಮೆರೆದ ಸಂಸ್ಥಾನ ಇವತ್ತಿನ ಬೆಳಗಾವಿ, ಕಾರವಾರ ಅವಿಭಜಿತ ಧಾರವಾಡದ ವ್ಯಾಪ್ತಿಯನ್ನು ಹೊಂದಿತ್ತು.

ಇಂತಹ ಸಂಸ್ಥಾನದಲ್ಲಿ ಸೂರ್ಯ ಮುಳಗದ ಸಾಮ್ರಾಜ್ಯವನ್ನು ಅಸ್ಥಂಗತ ಆಗುವಂತೆ ಮಾಡಿರುವದು ಸಂಸ್ಥಾನದ ಮೇರು ಸಾಧನೆ. ಜಾನ್ಸಿರಾಣಿ ಲಕ್ಷ್ಮೀ ಬಾಯಿಗೂ ಮೂವತೈದು ವರ್ಷಗಳ ಮುಂಚೆ ಕೆಂಪು ಮೋತಿ ಫಿರಂಗಿಗಳನ್ನು ಹಣಿದು ವಿಜಯದ ಬಾವುಟ ಹಾರಿಸಿದ್ದು ಜಗತ್ತಿನ ಇತಿಹಾಸದ ಮೊದಲ ಮೈಲುಗಲ್ಲೂ.

ಕಿತ್ತೂರು ಸಂಸ್ಥಾನ ಬಲ್ಲ ಮೂಲಗಳ ಪ್ರಕಾರ 1515 ರಿಂದ ಹಿರೇಮಲ್ಲ ಮತ್ತು ಚಿಕ್ಕಮಲ್ಲ ಎಂಬ ಸೇನಾನಿಗಳಿಂದ ಪ್ರಾರಂಭವಾಯಿತು 16 ನೇ ಶತಮಾನದಲ್ಲಿ ವಿಜಾಪೂರದ ಆದಿಲ್‌ಶಾಹಿಗೆ ಕೋಟೆ ಕಟ್ಟಲು ಸಾಮಾಗ್ರಿ ಪೂರೈಸಿದಾಕ್ಕಾಗಿ ಸಂಪಗಾಂವ ಪ್ರದೇಶವನ್ನು ಸಹೋದರರಿಗೆ ಜಾಹಿರು ನೀಡದನು.

ಇವರು ಮೂಲತಹ ಕೃಷ್ಣಾ ಮತ್ತು ಬೀಮಾ ನದಿಗಳ ಮಧ್ಯ ಬರುವ (ಯಾದಗಿರಿ ಮತ್ತು ಗುಲಬರ್ಗಾ) ಸಗರ ನಾಡಿಗೆ ಸೇರಿದ ಸೇನಾನಿಗಳು ಎಂದು ಕೆಲವರು ಹೇಳಿದರೆ ಇನ್ನು ಕಲವರು ಶಿವಮೋಗ ಜಿಲ್ಲೆ ಸಾಗರ ತಾಲೂಕಿನವರು ಎಂದು ಹೇಳುವರು. ನಂಬಿಕಸ್ತ ಶೂರ ಸೇನಾನಿಯಾದ ಹಿರೇ ಮಲ್ಲನಿಗೆ ಶಮ್‌ಶೇರ ಜಂಗ್ ಬಾಹಾದೂರ ಎಂಬ ಬಿರುದನ್ನು ಆದಿಲ್ಲಶಾಹಿ ನೀಡಿದನು.

ಈ ಸಹೋದರನ ನಂತರ ಕಿತ್ತೂರು ಸಂಸ್ಥಾನದಲ್ಲಿ ಪ್ರಾಮುಖ್ಯತೆ ಪಡೆದ ದೊರೆ ಐದನೆ ಅಲ್ಲಪ್ಪಗೌಡ ದೇಸಾಯಿ 1660 ರಿಂದ 1691 ರ ವರೆಗೆ ಆಳ್ವಿಕೆ ಮಾಡಿದನು ಆಡಳಿತದ ಕೇಂದ್ರವನ್ನು ಸಂಪಾಗಾಂವದಿಂದ ಕಿತ್ತೂರಿಗೆ ವರ್ಗಾಯಿಸಿದ ದೊರೆ ಕಿತ್ತೂರನ್ನು ಆರಂಭದಲ್ಲಿ ಗಿಜಗನಹಳ್ಲಿ ಎಂದು ಕರೆಯುತ್ತಿದ್ದರು.

ಇಂದಿನ ಕಿತ್ತೂರು ಕೋಟೆಯು1676 ರಿಂದ 1686 ರವರೆಗೆ ಅಲ್ಲಪ್ಪಗೌಡ ದೇಸಾಯಿಂದ ನಿರ್ಮಿತವಾದ ಮೂರು ಅಂತಸ್ತಿನ ಕೋಟೆ, 1688 ರಿಂದ 1691 ರ ವರೆಗೆ ಕಲ್ಮಠ ನಿರ್ಮಾಣ ಮಾಡಿದ ಎಂಬುದು ಪ್ರತೀತಿ.

            ಯುದ್ದಕ್ಕೆ ಅಣಿಯಾದ ರಾಣಿ ಚನ್ನಮ್ಮ 

ಮುದಿ ಮಲ್ಲಪ್ಪಗೌಡ ದೇಸಾಯಿ 1691 ರಿಂದ 1699 ರವರೆಗೆ ಆಳ್ವಿಕೆ ಮಾಡಿದ ಬಿಜಾಪೂರ ಆದಿಲ್‌ಷಾ ಇವನಿಗೆ ಶಮ್‌ಶೇರ್‌ಜಂಗ್ ಬಾಹದ್ದೂರ, ದಿಲಾವರ್ ಖಾನ್ ಬಾಹದ್ದೂರ ದಿಲಾವರ್ ಜಂಗ್ ಬಾಹಾದ್ದುರ ಎಂಬ ಬಿರುದನ್ನು ನೀಡಿದನು ಅ ನಂತರ ಇತನ ನಂತರ ಆಳ್ವಿಕೆ ಮಾಡಿದ ಪ್ರಮುಖ ಮಾಳವರುದ್ರಗೌಡ 1734 ರಿಂದ 1746 ರವರೆಗೆ ಆಳ್ವಿಕೆ ಮಾಡಿದ ಇತನ ಪತ್ನಿ ರಾಣಿ ಮಲ್ಲಮ್ಮಾ ದೈರ್ಯ ಶಾಲಿ ಮಹಿಳೆ ಇತ ಉತ್ತರ ಭಾರತಕ್ಕೆ ಶಿಕ್ಷಣ ಪಡೆಯಲು ಹೊಂದಾಗ ಮುಸ್ಲಿಂ ತರುಣಿಯನ್ನು ಪ್ರೇಮಿಸಿ ವಿವಾಹವಾದ ಇದಕ್ಕೆ ಸಂಸ್ಥಾನದಲ್ಲಿ ವಿರೋದ ವ್ಯಕ್ತವಾದಾಗ ಸಂಸ್ಥಾನದ ಉತ್ತರ ಭಾಗದ ದೇಶನೂರನಲ್ಲಿ ಅವಳ ವಾಸಕ್ಕೆ ಎಂದು ನಿರಂಜನಿ ಮಹಲ ಕಟ್ಟಸಿ ತನ್ನ ಆಡಳಿತ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದನು. ಇಂತ ಸಂದರ್ಭದಲ್ಲಿ ಸಂಸ್ಥಾನದ ಆಡಳಿತವನ್ನು ರಾಣಿ ಮಲ್ಲಮ್ಮ ನಿರ್ವಹಿಸುತ್ತಿದ್ದಳು.

ನಂತರ ವೀರಪ್ಪಗೌಡ ಸಂಸ್ಥಾನದ ಅಡಳಿತದ ಚುಕ್ಕಾನೆ ಹಿಡಿದನು 1749 ರಿಂದ 1782 ರವರೆಗೆ ಆಳ್ವಿಕೆ ಮಾಡಿದ ಹೈದಾರಲಿ ಮತ್ತು ಪೇಶ್ವೆಗಳನ್ನು ಸೋಲಿಸಿ ದಕ್ಷಿಣ ಭಾರತದ ಪ್ರಬಲ ದೊರೆಯಾದನು ತಾಸಗಾಂವದ ಪಟವರ್ಧನನ್ನು ಸೋಲಿಸಿದನು. ನಂತರ ಸ್ಥಾನಿಕ ಪ್ರತಿನಿಧಿಯಾದ ಪರುಸುರಾಮ ಬಾವು ಗೋಕಾದ ಮೇಲೆ ದಾಳಿ ಮಾಡಿದಾಗ ವೀರಪ್ಪಗೌಡ ದೇಸಾಯಿನ್ನು ಎರಡು ವರ್ಷಗಳ ಕಾಲ ಮಿರಜನಲ್ಲಿ ಬಂದಿಸಿ ಇಟ್ಟನು 1782 ರಲ್ಲಿ ಇತ ಮಿರಜನಲ್ಲಿಯೇ ನಿಧನನಾದನು. ಮೃತ ದೇಹವನ್ನು ಮಿರಜನಿಂದ ತಂದು ಕಲ್ಮಠದಲ್ಲಿ ಸಮಾದಿ ಮಾಡಲಾಯಿತು.

ನಂತರ ಆಡಳಿತ ನಡೆಸಿ ದೊರೆ ಮಲ್ಲಸರ್ಜ ದೇಸಾಯಿ 1782 ರಿಂದ 1816 ರ ವರೆಗೆ ಆಳ್ವಿಕೆ ನಡೆಸಿದ ಚನ್ನಮ್ಮ ಮತ್ತು ರುದ್ರಮ್ಮಾ ಪತ್ನಿಯರು ಇತನ ಆಳ್ವಿಕೆಯಲ್ಲಿ ಕಿತ್ತೂರು ಸಂಸ್ಥಾನ ಉತ್ತಮ ಆರ್ಥಿಕವಾಗಿ ರಾಜಕೀಯವಾಗಿ ಸುಸ್ಥಿತಿಯಲ್ಲಿ ಇತ್ತು.

1785 ರಲ್ಲಿ ಟೀಪೂ ಸುಲ್ತಾನ ಇತನನ್ನು ಬಂದಿಸಿ ರಾಯಚೂರ ಜಿಲ್ಲೆ ಕಬ್ಬಾಳ ದುರ್ಗದಲ್ಲಿ ಬಂದಿಸಿ ಇಟ್ಟಿದನು ನಂತರ 1813 ರಿಂದ 1816 ರ ವರೆಗೆ ಪೇಶ್ವ ಎರಡನೇಯ ಬಾಜಿರಾಯ ಇವತ್ತಿನ ಚಿದಂಬರ ದಿಕ್ಷಿತ ದೇವಸ್ಥಾನದಲ್ಲಿ ಬೇಟಿಯಾಗಲು ತೆರಳಿದಾಗ ಪೂಣಾಕ್ಕೆ ಬಂದು ಬೇಟಿಯಾಗಲು ತಿಳಿಸಿದನು ಆ ಪ್ರಕಾರ ಬೇಟಿಯಾಗಲು ಹೋದಾಗ ಕುತಂತ್ರದಿಂದ ಮೂರು ವರ್ಷ ಬಂದಿಸಿ ಇಟ್ಟನು ನಂತರ ಇತನ ಆರೋಗ್ಯ ಬಹಳ ಕೃಷ್ಟವಾದಾಗ. ಆತಂಕಗೊಂಡು ಬಿಡುಗಡೆಗೊಳಿಸಿದನು.

ಮಾರ್ಗ ಮಧ್ಯದಲ್ಲಿ ಬರುವಾಗ ಅರಬಾವಿ ದುರದುಂಡೇಶ್ವರ ಮಠದಲ್ಲಿ ಪ್ರಾಣ ಬಿಟ್ಟಿರುವುದಾಗಿ ಇತಿಹಾಸಕಾರರು ಹೇಳುತ್ತಾರೆ ನಂತರ ಇತನ ಸಮಾಧಿಯನ್ನು ವಣ್ಣೂರಿನಲ್ಲಿ ಸ್ಮಾರಕವನ್ನು ಕಿತ್ತೂರಿನ ಕಲ್ಮಠದಲ್ಲಿ ನಿರ್ಮಿಸಲಾಗಿದೆ ಎಂದು ದಾಖಲೆಗಳು ಹೇಳುತ್ತವೆ.

ನಂತರ ರಾಣಿ ರುದ್ರಮ್ಮನ ಮಗನಾದ ಶಿವಲಿಂಗ ರುದ್ರಸರ್ಜ ಅಧಿಕಾರಕ್ಕೆ ಬಂದನು 1816 ರಿಂದ 1824 ರವರೆಗೆ ಆಳ್ವಿಕೆ ನಡೆಸಿದನು 1822 ರಲ್ಲಿ ಶಿವಲಿಂಗ ರುದ್ರಸರ್ಜನಗೆ ಥ್ಯಾಕರೆ ಪತ್ರ ಬರೆದು ಕಿತ್ತೂರು ದರೋಡೆಕೋರರ ಆಶ್ರಯ ತಾನವಾಗುತ್ತಿದೆ ಎಂದು ಆರೋಪಿಸಿದ. 1818 ರಲ್ಲಿ ಖಾನಾಪೂರ (ಮನ್ರೋ) ಒಪ್ಪಂದದ ಪ್ರಕಾರ ಖಾನಾಪೂರವನ್ನು ಬ್ರಿಟಿಷ್‌ರಿಗೆ ಬಿಟ್ಟುಕೊಡಬೇಕಾದಾಗ ರಾಣಿ ಚನ್ನಮ್ಮಾ ಬ್ರಿಟಿಷ್‌ರ ವಿರುದ್ಧ ಕುದಿಯುತ್ತಿದ್ದಳು.

ಇಂತ ಸಂದರ್ಭದಲ್ಲಿ 1824 ರಲ್ಲಿ ಜುಲೈ 10 ರಂದು ಶಿವಲಿಂಗ ರುದ್ರಸರ್ಜ ಮಗುವನ್ನು ದತ್ತಕ ಪಡೆದುಕೊಳ್ಳವ ವಿಚಾರವನ್ನು ಬ್ರಿಟಿಷ್‌ರ ಗಮನಕ್ಕೆ ತರಲು ಪತ್ರ ಬರೆದನು ಇದೆ ಸಂದರ್ಭದಲ್ಲಿ ಕಿತ್ತೂರು ಸಂಸ್ಥಾನದ ಸೇನಾ ನಾಯಕ ಸರದಾರ ಗುರುಸಿದ್ದಪ್ಪ ಮಾಸ್ತಮರಡಿಯ ಬಾಳನ ಗೌಡನ ಮಗ ಶಿವಲಿಂಗಪ್ಪ (ಸವಾಯಿ ಮಲಸರ್ಜ) ನನ್ನು ಸಂಸ್ಥಾನಕ್ಕೆ ಕರೆದುಕೊಂಡು ಬಂದನು. ಇತನನ್ನು ದತ್ತಕ ತೆಗೆದುಕೊಳ್ಳುವ ನಿರ್ದಾರವನ್ನು ಮಾಡಿದ.

ಆದರೆ ಜುಲೈ ಹತ್ತರಂದು ತ್ಯಾಕರೆಗೆ ಬರೆದ ಪತ್ರವನ್ನು ಧಾರವಾಡಕ್ಕೆ ಪತ್ರವನ್ನು ರವಾಣಿಸಲಿಲ್ಲ ಕಾರಣ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಸೆಪ್ಟೆಂಬರ 11 ರಂದು ಶಿವಲಿಂಗ ರುದ್ರಸರ್ಜನ ಆರೋಗ್ಯ ಹದೆಗೆಟ್ಟು ಅದೇ ದಿನ ಅವಸರವಾಗಿ ದತ್ತ ಪ್ರಕ್ರಿಯೆ ಮೂಗಿಸಿದ ಸೆಪ್ಟಂಬರ 12 ರಂದು ಜುಲೈ ಹತ್ತರಂದು ಶೀವಲಿಂಗ ರುದ್ರಸರ್ಜ ಬರೆದ ಪತ್ರವನ್ನು ಕೊಣ್ಣುರು ಮಲ್ಲಪ್ಪ ಥ್ಯಾಕರೆಗೆ ಮುಟ್ಟಿಸಿದನು.

ಪತ್ರದಲ್ಲಿ ದಿನಾಂಕ ಜುಲೈ 10 ಎಂದು ಇದ್ದಿದ್ದನ್ನು ಗಮನಿಸಿ ಸಂಶೆಯಗೊಂಡನು ಸೆಪ್ಟಂಬರ12 ರಂದು ಶಿವಲಿಂಗ ರುದ್ರಸರ್ಜ ಮರಣ ಹೊಂದಿದನು. ಪತ್ರವನ್ನು ಕುರಿತು ತ್ಯಾಕರೆ ಪತ್ರ ಬೇರೆಯವರಿಂದ ಬರೆಯಲಪಟ್ಟಿರಬೇಕು ಅಥವಾ ಸಂಸ್ಥಾನ ಉಳಸಿಕೊಳ್ಳಲು ಆತನ ವಿಚಾರ ಶಕ್ತಿ ಕಳೆದಕೊಂಡ ಸಂದರ್ಭದಲ್ಲಿ ಆತನ ಸಹಿ ಪಡೆದಿರಬೇಕು ಎಂದು ಸಂಶಯಗೊಂಡನು.

ಸೆ 14 ರಂದು ತ್ಯಾಕರೆ ಕಿತ್ತೂರಿಗೆ ಬಂದನು ಅರಮನೆ ಶೋಧ ಮಾಡಿ ರಾಜ್ಯ ಮನೆತನದವರಿಗೆ ಬೆದರಿಕೆ ಹಾಕಿ ಅದೇ ದಿನ ಡೆಕ್ಕನ್ ಕಮೀಷಣರ ಚಾಪಲಿನ ಅವರಿಗೆ ಪತ್ರ ಬರೆದನು. ಪತ್ರದಲ್ಲಿ ಥ್ಯಾಕರೆನ ದುಷ್ಟ ವಿಚಾರಗಳು ಈ ರೀತಿ ಇವೆ ದತ್ತಕ ಮಗು ಕಿತ್ತೂರು ಸಂಸ್ಥಾನದ ಹತ್ತಿರದ ಸಂಭಂದಿಯಲ್ಲ. ದೇಸಾಯಿಯ ಅನುಯಾಯಿಗಳು ತಮ್ಮ ಪ್ರಭಾವ ಮುಂದು ವರೆಸಲು ಮಾಡಿದ ಕುತಂತ್ರ. ಪತ್ರದಲ್ಲಿಯ ಸಹಿ ಸ್ಪಷ್ಟವಾಗಿಲ್ಲ ದಿನಾಂಕದಲ್ಲಿ ತಾಳಮೇಳ ಇಲ್ಲವೆಂದು ಆರೋಪಿಸಿದ. ಪತ್ರದಲ್ಲಿ ಚನ್ನಮ್ಮನನ್ನು ಮಲತಾಯಿ ಎಂದು ಕರೆದಿರುವುದು ಆತನ ವಿಕಾರ ಮನಃಸ್ಥಿಯನ್ನು ತೊರುವುದು. ದತ್ತಕ ಖಾಯಿದೆ ಬದ್ದವಾಗಿ ಇರದೇ ಇರುವುದರಿಂದ ಮತ್ತು ಮೃತರ ದೇಸಾಯಿಯ ಪತ್ನಿ ಅಲ್ಪವಯಿ ಇರುವ ಕಾರಣ ಸಂಸ್ಥಾನದ ಜವಾಬ್ದಾರಿ ತನ್ನದು ಎಂದಿರುವುದು ಆತನ ಸಂಸ್ಥಾನ ನುಂಗುವ ಮನೋಸ್ಥಿಯನ್ನು ತೋರುವುದು.

ನಂತರ ಖಜಾನೆಯನ್ನು ಸೀಲ ಮಾಡಿದನು ಮತ್ತು ದತ್ತಕ ಪ್ರಕ್ರಿಯೆ ನಡೆದೆ ಇಲ್ಲ ಎನ್ನುವ ಕುರಿತು ಚಾಪ್ಲಿನಗೆ ವರದಿ ಮಾಡಿದನು. ಹಾವೇರಿಯ ವೆಂಕಟರಾಯನ ಲಿಖಿತ ಒಪ್ಪಿಗೆ ಇಲ್ಲದೆ ನನ್ನು ಬದಲಾವಣೆ ಮಾಡಕೂಡದು ಎಂದು ಆದೇಶ ನೀಡಿದನು. ನಂತರ ಮೂವತ್ತು ಜನ ಬ್ರಿಟಿಷ್ ಕಾವಲುಗಾರರನ್ನು ಕೋಟೆಯ ಪೂರ್ವ ಮತ್ತು ಪಶ್ಚಿಮ ದ್ವಾರ ಕಾಯಲು ನೆಮೀಸಿದ ಇದರಿಂದ ರಾಣಿ ಚನ್ನಮ್ಮ ಸರದಾರ ಗುರುಸಿದ್ದಪ್ಪ ಜ್ವಾಲಾಮುಖಿಯಂತ್ತಾದರು.

ಥ್ಯಾಕರೆ ನೀಡುತ್ತಿರುವ ತೊಂದರೆಯನ್ನು ಚನ್ನಮ್ಮ ಪತ್ರ ಮುಖಾಂತರ ಮುಂಬೈಯಿ ಗೌರ‍್ನರ ಎಲ್ಪಿನ್‌ಸ್ಟನ್ ಗಮನಕ್ಕೆ ತಂದರು ಸಹ ಸ್ಪಂದಿಸಲಿಲ್ಲ. ಮುಂದುವರೆದು ಥ್ಯಾಕರೆ ರಾಣಿ ಚನ್ನಮ್ಮ ಮತ್ತು ವೀರಮ್ಮಳ ಮಧ್ಯ ವೈಮನಸ್ಸು ಮುಡಿಸಲು ಯತ್ನಿಸಿ ವಿಫಲನಾದ. ನಂತರ ದತ್ತಕ ಮಗ ಶಿವಲಿಂಗಪ್ಪ ಕೂಡಲೆ ಸಂಸ್ಥಾನದಿಂದ ಹೋಗಬೇಕು ಎಂದು ಆದೇಶಿಸಿದ.

ಆಗ ಚನ್ನಮ್ಮ ರಾಜಕುಮಾರ ಇಲ್ಲಿ ಇರಲು ಅವಕಾಶವಿಲ್ಲದಿದರೆ ನಮಗೂ ಸಂಸ್ಥಾನ ಬಿಟ್ಟು ಹೋಗಲು ಅನುಮತಿ ನೀಡಬೇಕು ಎಂದು ಕೇಳಿದಳು ಆಗ ಚನ್ನಮ್ಮಾಜೀ ಹೋಗಬಹುದು ಆದರೆ ವೀರಮ್ಮಾಜೀ ಹೋಗಲು ಅವಕಾಶವಿಲ್ಲ ಎಂದು ಒಡಕಿನ ಮಾತನಾಡಿದ ಸಂಸ್ಥಾನ ಬಿಟ್ಟು ಹೋಗಲು ಪ್ರಯಾಣಕ್ಕೆ ಬೇಕಾಗು ಖರ್ಚನು ಬರಿಸುವುದಾಗಿ ಕುಹಕದ ಮಾತುನಾಡಿದನು. ಅಂತಿಮವಾಗಿ ಚನ್ನಮ್ಮ ಮಾಡು ಇಲ್ಲವೆ ಮಡಿ ಎಂದು ಯುದ್ದಕ್ಕೆ ಅನಿಯಾದಳು.

ಅ 19 ರಂದು ಬಾಗಲಕೋಟೆ ಕಲಾದಿಗೆಯಿಂದ ಬೆಳಗಾವಿಗೆ ಬರುತ್ತಿದ 5 ನೇ ನೆಟಿವ ಇನ್‌ಪೇಂಟ್ರಿ ಸೇನೆ ಕಿತ್ತೂರಿಗೆ ಬರಲು ಥ್ಯಾಕರೆ ಆದೇಶಿಸಿದ ಅ 20 ರಂದು ಬ್ರಟಿಷ್ ಸೈನ್ ಕಿತ್ತೂರಿನ ಕೆಮ್ಮನಮರಡಿ ಸುತ್ತ ಡೆರೆಗಳನ್ನು ರಚಿಸಿಕೊಂಡರು. ಅ 21 ರಂದು ಸ್ಟಿವನ್ ಸನ್ ಎಲಿಯೆಟ್ ಕೋಟೆಗೆ ಬಂದು ಖಜಾನೆಯ ಸುರಕ್ಷತೆಯ ಒಪ್ಪದಕ್ಕೆ ಸಹಿ ಹಾಕುವಂತೆ ಒತ್ತಾಯಿಸಿದ ಆದರೆ ಸರದಾರ ಗುರುಸಿದ್ದಪ್ಪ ಚನ್ನಮ್ಮಾಜೀಯ ಒಪ್ಪಿಗೆ ಇಲ್ಲದೆ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿರಸ್ಕಾರಿಸಿದ. ಅ 22 ರಂದು ಕೋಪಗೊಂಡ ಥ್ಯಾಕರೆ ಮುಂಜಾನೆ ಒಳಗಾಗಿ ಶರಣಾಗತರಾಗಿ ರಾಜಿ ಮಾಡಿಕೊಳ್ಳದಿದ್ದರೆ ಅಪಾಯ ಕಾಯ್ದಿದೆ ಎಂದು ಎಚ್ಚರಿಕೆ ನೀಡಿದ.

ಅ 23 ರಂದು ಕಿತ್ತೂರು ಕೋಟೆಯ ಪೂರ್ವ ದ್ವಾರದಲ್ಲಿ ಸೈನಿಕನನ್ನು ಬದಲಾಯಿಸಲು ಆದೇಶಿಸಿದ ಆದರೆ ಸರದಾರ ಗುರುಸಿದ್ದಪ್ಪ ನಿರಾಕರಿಸಿದ ಮತ್ತು ಕೋಟೆ ಒಳಗಡೆ 2 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಗೌಪ್ಯವಾಗಿ ನಿಯೋಜಿಸಿದ ಸರದಾರ ಗುರುಸಿದ್ದಪ್ಪ ಥ್ಯಾಕರೆ ಅಂತಿಮವಾಗಿ ಒಂದು ಗಡಿಯೊಳಗೆ (24 ಗಂಟೆ) ಕೋಟೆಯ ಬಾಗಿಲು ತೆರೆಯದಿದ್ದರೆ ತೋಪುಗಳಿಂದ ಕೋಟೆಯ ದ್ವಾರ ಬಾಗಿಲು ಒಡೆಯುವುದಾಗಿ ತಿಳಿಸಿದ ಕಿತ್ತೂರು ಸೈನಿಕರು ಕೋಟೆಯ ಬಾಗಿಲನ್ನು ಒಳಗಡೆಯಿಂದ ಹೊರಗೆತೆಗೆದು ಬ್ರಿಟಿಷ್ ಸೈನ್ಯದ ಮೇಲೆ ಕಿತ್ತೂರು ಸೈನ್ಯ ಅಪ್ಪಳಿಸಿ ತೊಪಿಗೆ ಬೆಂಕಿ ಇಡುತ್ತಿದ್ದ ಕ್ಯಾಪ್ಟನ್ನ ಬ್ಲಾಕ್ ಮತ್ತು ಡೈಟನ್ ಅವರಿಂದ ತೊಪುಗಳನ್ನು ವಶ ಪಡಿಸಿಕೊಂಡು ರೊಚ್ಚಿಗೆದ್ದ ಕಿತ್ತೂರು ಸೈನ್ಯ ಅವರ ರುಂಡವನ್ನು ಕತ್ತರಿಸಿದರು ಕ್ಷಣಾರ್ಧದಲ್ಲಿ ಆತಂಕಗೊಂಡು ಥ್ಯಾಕರೆ ಸೈನ್ಯಕ್ಕೆ ಮಾರ್ಗದರ್ಶನ ಮಾಡುತ್ತಿದ್ದ ಚನ್ನಮ್ಮನ ಕಡೆಗೆ ದಾವಿಸಿ ಬರುತ್ತಿದ ಥ್ಯಾಕರೆಯನ್ನು ಅಮಟೂರು ಬಾಳಪ್ಪ ಗುಂಡಿಟ್ಟು ಕೊಂದನ್ನು.

ರಾಮಹಸಬಿ ಎಂಬ ಕಿತ್ತೂರಿನ ನಿಗ್ರೋ ಸೈನಿಕ ಥ್ಯಾಕರೆ ರುಂಡವನ್ನು ಕತ್ತರಿಸಿ ತನ್ನ ಖಡ್ಗದ ತುದಿಗೆ ಸಿಕ್ಕಿಸಿಕೊಂಡು ವಿಜಯದ ಕೆಕೆ ಹಾಕಿದನು ಬ್ರಿಟಿಷ್ ಸೈನಿಕರು ಸಿಕ್ಕ ಸಿಕ್ಕ ಕಡೆಗೆ ಓಡಿದರು. ೮೦ ಜನ ಬ್ರಟಿಷ್ ಸೈನಿಕರು ಕೊಲ್ಲಲ್ಪಟ್ಟರು 40 ಜನ ಸೆರೆಯಾಳಾದರು. ಥ್ಯಾಕರೆಯ ಜೊತೆಗೆ ಕ್ಯಾಪ್ಟನ್ ಬ್ಲಾಕ, ಲೆಪ್ಟಿನಟ್ ಡೈಟನ್, ಲೇಪ್ಡಿನಂಟ ಸಿವೇಲ್ ಕೊಲ್ಲಲ್‌ಪಟ್ಟರು.

ಇವರನ್ನು ಧಾರವಾಡದ ಮನಿಕಿಲ್ಲಾದಲ್ಲಿ ಸಮಾಧಿ ಮಾಡಲಾಯಿತು. ಕಿತ್ತೂರಿಗೆ ದ್ರೋಹ ಬಗೆದ ಸಂಸ್ಥಾನದ ಸಿಬ್ಬಂದಿಗಳನ್ನು ಆನೆಕಾಲಿನಿಂದ ತುಳಿಸಲಾಯಿತು.
ಬ್ರಿಟಿಷ್‌ರ ಕಛೇರಿಯಲ್ಲಿ ಕೇಲಸ ಮಾಡುತ್ತಿದ್ದ ಥ್ಯಾಕರೆಯ ರಾಜಕೀಯ ಸಲಹೆಗಾರರಾದ ಸ್ಟಿವನ್ ಸನ್, ಇಲಿಯಟ್ ಮತ್ತು ಶಿರಸ್ಥೆದಾರ ಶ್ರೀನಿವಾಸ ಬಂದಿಸಿ ಘಾಸಿ ಹಾಕಲು ಚನ್ನಮ್ಮಾಜಿಯ ಒಪ್ಪಿಗೆ ಕೇಳಿದಳು. ಆದರೆ ಚನ್ನಮ್ಮಾಜಿ ನಿರಾಕರಿಸಿದಳು. ಅಂದು ರಾತ್ರಿ ಕಿತ್ತೂರಿನಲ್ಲಿ ವಿಜಯೋತ್ಸವದ ಕಹಳೆ ಮುಗಿಲು ಮುಟ್ಟಿತು. ರಾಣಿ ಚನ್ನಮ್ಮಾಜಿ ಜಗತ್ತಿನ ಇತಿಹಾಸದಲ್ಲಿ ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಮುಳುಗಿಸಿದ ಜಗತ್ತಿನ ರಾಣಿಯರ ಸಾಲಿನಲ್ಲಿ ಮೊದಲ ಮತ್ತು ಏಕೈಕ ರಾಣಿ ಚನ್ನಮ್ಮ.

ಅವಳ ಹೆಸರಿನಲ್ಲಿ ಅ 23 ಮತ್ತು 24 ರಂದು ನಡೆಯುವ ಕಿತ್ತೂರು ಉತ್ಸವಕ್ಕೆ ನಾಡಿನ ಸಮಸ್ತ ಜನತೆಗೆ ಸ್ವಾಗತ ಸುಸ್ವಾಗತ.

 

ಲೇಖಕರು:ಬಸವರಾಜ ಶಂ ಚಿನಗುಡಿ.                                     ಚನ್ನಮ್ಮನ ಕಿತ್ತೂರು

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";