ದಕ್ಷಿಣ ಭಾರತದ ಪ್ರಭಾವಿ ದೊರೆ: ಕಿತ್ತೂರಿನ ಮಲ್ಲಸರ್ಜ ದೇಸಾಯಿ.

ದಕ್ಷಿಣ ಭಾರತದಲ್ಲಿ ಪ್ರಬಲ ಸಂಸ್ಥಾನಗಳ ದೊರೆಗಳಾದ ಹೈದರಾಲಿ, ಟಿಪ್ಪು ,ಪೂನಾದ ಪೇಸ್ವೆಗಳು ,ಬಿಜಾಪುರದ ಆದಿಲ್ ಶಾಹಿಗಳು ,ಹೈದರಾಬಾದಿನ ನಿಜಾಮರು ಪ್ರಬಲವಾಗಿದ್ದರು.

ಇವುಗಳ ಮಧ್ಯ ದೇಶಿಯ ಸಣ್ಣಪುಟ್ಟ ಸಂಸ್ಥಾನಗಳು ತಮ್ಮ ಅಳಿವು-ಉಳಿವಿನ ಲಾಭಕ್ಕೆ ಇನ್ನೊಬ್ಬರಿಗೆ ದ್ರೋಹ ಮಾಡುವುದರಲ್ಲಿ ತೊಡಗಿದ್ದರೆ ವಿನಹ ದೇಶಕ್ಕೆ ಒದಗುವ ವಿಪತ್ತಿನ ಅರಿವು ಅವರಿಗಿರಲಿಲ್ಲ .

1785 ಟಿಪ್ಪುಸುಲ್ತಾನ್ ಧಾರವಾಡದ ನರಗುಂದ ,ರಾಮದುರ್ಗ ಕಿತ್ತೂರಿನ ಮೇಲೆ ದಾಳಿ ಮಾಡಿ ಆಕ್ರಮಿಸಿಕೊಂಡನು .

ಆತನ ಸೇನಾಧಿಕಾರಿ ಬದ್ರುಲ್ ಜಮಾಲುದ್ದೀನ್ ಖಾನ ಕಿತ್ತೂರಿನ ಆಸ್ತಿಯನ್ನು ತನ್ನ ಕೈಗೆ ತೆಗೆದುಕೊಂಡು ಕಿತ್ತೂರು ದೇಸಾಯರ ಅಧಿಕಾರವನ್ನು ಮೊಟಕುಗೊಳಿಸಿದ ಆವರಿಗೆ ವರ್ಷಾಸನ ನಿಗದಿಮಾಡಿದ .

ಅಷ್ಟೇ ಅಲ್ಲದೇ 1785 ರಿಂದ 1788 ರವರಿಗೆ ಮಲ್ಲಸರ್ಜ ದೇಸಾಯಿಯನ್ನು ಟಿಪ್ಪುಸುಲ್ತಾನ ಇವತ್ತಿನ ಶ್ರೀರಂಗಪಟ್ಟಣದ ಕಬ್ಬಾಳದುರ್ಗದಲ್ಲಿ ಬಂಧಿಸಿಟ್ಟಿದ್ದ.

ಶ್ರೀರಂಗಪಟ್ಟಣದಿಂದ ದೇಸಾಯಿ ಮಲ್ಲಸರ್ಜ ತಪ್ಪಿಸಿಕೊಂಡು ತಂಜಾವೂರು ಬಬಲೇಶ್ವರ ಅಲ್ಲಿಂದ ಬೈಲಹೋಂಗಲ ನಂತರ ಕಿತ್ತೂರಿಗೆ 1788ರಲ್ಲಿ ಬಂದು ತಲುಪಿದನು.

1792 ರ ಮೂರನೇ ಆಂಗ್ಲೋ ಮೈಸೂರು ಯುದ್ಧ ಮತ್ತು ಶ್ರೀರಂಗಪಟ್ಟಣ ಒಪ್ಪಂದ ಕಿತ್ತೂರಿನ ಮೇಲೆ ಬಹಳ ಪ್ರಭಾವ ಬೀರಿತು.

ಕಾರಣ ಇದಕ್ಕೂ ಮುಂಚೆ ಕಿತ್ತೂರು ಟೀಪ್ಪುವಿನ ನಿಯಂತ್ರಣದಲ್ಲಿದ್ದರೆ ಶ್ರಿರಂಗಪಟ್ಟಣದ ಒಪ್ಪಂದದ ನಂತರದಲ್ಲಿ ಕಿತ್ತೂರು ಪೇಶ್ವೆಗಳ ನಿಯಂತ್ರಣಕ್ಕೆ ಬರುವ ಕಾಲಘಟ್ಟ ಬಂದಿತ್ತು.

ಟಿಪ್ಪುವಿನ ನಿಧನಾನಂತರ 1800 ರಲ್ಲಿ ದೊಂಢಿಯವಾಘನನ್ನು ಬ್ರಿಟಿಷರು ಬಂದ ಮುಕ್ತಗೊಳಿಸುವರು.ಆಗ ದೋಂಡಿಯಾವಾಘ ಕಿತ್ತೂರಿಗೆ ಬರುವನು.ಆಗ ದೋಂಡಿಯಾವಾಘ ಸ್ವತಂತ್ರ ಸೈನ್ಯ ಕಟ್ಟಿಕೊಂಡು ಬ್ರಿಟಿಷರಿಗೆ ತೆಲೆನೋವಾದನು.

ದೋಂಡಿಯವಾಘನನ್ನು ಹಿಡಿಯಲು ಬ್ರೀಟಿಷ ಅಧಿಕಾರಿ ಅರ್ಥರ ವೆಲ್ಲಸ್ಲಿ ಕಿತ್ತೂರಿಗೆ ಅಂಟಿಕೊಂಡಿರುವ ಮಲಪ್ರಭಾ ನದಿಯ ದಂಡೆಗುಂಟ ಒಂದು ವಾರಗಳ ಕಾಲ ವಾಸ್ತವ್ಯ ಮಾಡಿ ದೋಂಡಿಯವಾಘನನ್ನು ಹಿಡಿಯಲು ವಾಸ್ತವ್ಯ ಮಾಡಿರುವುದು ಇ ಭಾಗದ ಜನರಿಗೆ ತಿಳಿಯದೆ ಇರುವುದು ಬೇಸರ.

ಕಿತ್ತೂರಿನ ಏಳಿಗೆಯನ್ನು ಸಹಿಸದ ಪೇಶ್ವೆ ಎರಡನೇ ಭಾಜಿರಾಯ 1804ರಲ್ಲಿ ಬ್ರಿಟಿಷ್ ಅಧಿಕಾರಿ ವೆಲ್ಲಸ್ಲಿಗೆ ಕಿತ್ತೂರಿನ ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಸಲಹೆ ನೀಡಿದನು .

ಪ್ರತಿಯಾಗಿ ವೆಲ್ಲಸ್ಲಿ ,ಪೇಶ್ವೆ ಎರಡನೇಯ ಬಾಜೀರಾಯನಿಗೆ ಪತ್ರ ಒಂದನ್ನು ರವಾನಿಸುತ್ತಾನೆ. ಅದರಲ್ಲಿ ಹೀಗಿರುತ್ತೆ.ಕಿತ್ತೂರು ಜನರು ಕ್ರಾಂತಿಕಾರಿಗಳು ಮತ್ತು ಕಿತ್ತೂರ ರಾಜರೊಡನೆ ಕದನಕ್ಕಿಳಿಯಲು ನಾವು ಹಿಂಜರಿಯುತ್ತೇವೆ ಎಂದು ಪತ್ರದಲ್ಲಿ ತಿಳಸುತ್ತಾನೆ.(ಮಹಾರಾಷ್ಟ್ರದ ಖ್ಯಾತ ಇತಿಹಾಸಕಾರರಾದ ರಾಮಚಂದ್ರ ಡೇರೆಯವರು ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.)

 

ಲೇಖನ:ಮಹೇಶ ನೀಲಕಂಠ ಚನ್ನಂಗಿ.
ಮುಖ್ಯಶಿಕ್ಷಕರು.
ಚನ್ನಮ್ಮನ ಕಿತ್ತೂರ.
M.9740313820.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";