ಸಹೋದ್ಯೋಗಿ ಯುವತಿಗೆ ನಗ್ನ ಚಿತ್ರ ಕಳುಹಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಫಾರೂಖ್ನನ್ನು ಇತ್ತಿಚೆಗೆ ಮಹಿಳಾ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕನಾಗಿ ಕಾರ್ಯನಿರ್ವಾಹಿಸುತ್ತಿರುವ ಫಾರೂಖ್ ಸಹೊದ್ಯೋಗಿ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಪಾಂಡವೇಶ್ವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಫಾರೂಖ್ ವಾಟ್ಸಪ್ಪಿನಲ್ಲಿ ಅಶ್ಲೀಲ ಸಂದೇಶ ರವಾನ, ನಗ್ನ ಚಿತ್ರಗಳನ್ನು ಕಳಿಸುವುದು, ತಾನು ಹೇಳಿದಂತೆ ಕೇಳಬೇಕೆಂದು ಒತ್ತಾಯಿಸುವುದು ಮಾಡುತ್ತಿದ್ದನು. ಇದಕ್ಕೆ ಯುವತಿ ಒಪ್ಪದಿದ್ದಾಗ ಆಕೆಯ ಮೈಕೈ ಮುಟ್ಟಿ ಕಿರುಕುಳ ನೀಡುತ್ತಿದ್ದನು ಎಂದು ಯುವತಿ ಫಾರೂಖ್ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಯುವತಿ ದಾಖಲಿಸಿದ ದೂರಿನನ್ವಯ ಆರೋಪಿ ಫಾರೂಖ್ನನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.