ಸುದ್ದಿ ಸದ್ದು ನ್ಯೂಸ್
ಬಳ್ಳಾರಿ (ಡಿಸೆಂಬರ್ 23): ಬಲವಂತದ ಮತಾಂತರಕ್ಕೆ ಕಡಿವಾಣ ಹಾಕುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ – 2021 ನ್ನು ರಾಜ್ಯ ಸರಕಾರ ಮಂಡಿಸಿರುವುದು ಬಹಳ ಸ್ವಾಗತಾರ್ಹ ಸಂಗತಿ. ಹಲವು ಧರ್ಮಗಳು ಸೇರಿ ನಮ್ಮ ಭಾರತ ದೇಶವನ್ನು ರೂಪಿಸಿವೆ. ಸಂವಿಧಾನದ 25 ನೇ ವಿಧಿಯು ದೇಶದ ಪ್ರತಿಯೊಬ್ಬ ಪ್ರಜೆಗೂ ತನ್ನ ಧಾರ್ಮಿಕ ನಂಬಿಕೆಯನ್ನು ಆಚರಿಸುವ, ಸಾರುವ ಹಾಗೂ ಪ್ರಚಾರ ಮಾಡುವ ಹಕ್ಕನ್ನು ನೀಡುತ್ತದೆ. ಆದರೆ, ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುವಂತಹದ್ದು ಆಗಬಾರದು.
ಇತ್ತೀಚಿನ ದಿನಗಳಲ್ಲಿ ವ್ಯಕ್ತಿಯ ಬಡತನ, ಕಾಯಿಲೆ ಹೀಗೆ ಹತ್ತು ಹಲವು ದೌರ್ಬಲ್ಯಗಳನ್ನು ಬಳಸಿಕೊಂಡು ಹಲವಾರು ಕಡೆ ಮತಾಂತರಗಳು ನಡೆಯುತ್ತಿವೆ. ಸ್ವ ಇಚ್ಚೆಯಿಂದ ನಡೆಯುವ ಮತಾಂತರಕ್ಕೆ ಯಾರದ್ದೂ ಆಕ್ಷೇಪವಿಲ್ಲ. ಆದರೆ, ಆಮಿಷದಿಂದ ಹಾಗೂ ಬಲವಂತದಿಂದ ಮಾಡಲಾಗುವ ಮತಾಂತರಗಳು ನಮ್ಮ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡುತ್ತಿವೆ. ಇಂತಹ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತಂದಿರುವ ವಿಧೇಯಕ ಬಹಳ ಸೂಕ್ತವಾಗಿದೆ.
ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ್ ಮುಲಾಲಿ ತಮ್ಮ ಮುಖಪುಟದಲ್ಲಿ ಹಂಚಿಕೊಂಡಿದ್ದಾರೆ.