ವ್ಯಾಕ್ಸಿನ್: ಹುಡಗಿ ಜನತಾನಗರದ ಕಸ್ತುರಬಾ ಗಾಂಧಿ ಬಾಲಿಕಾ ವಸತಿಸಹಿತ ಶಾಲೆಯ 18ವಿದ್ಯಾರ್ಥಿನಿಯರು ಅಸ್ವಸ್ತ

ಉಮೇಶ ಗೌರಿ (ಯರಡಾಲ)

ಬೀದರ್: ಜಿಲ್ಲೆಯ ಹುಮನಾಬಾದ್ ತಾಲ್ಲೂಕು ಹುಡಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ವ್ಯಾಕ್ಸಿನ ಪಡೆದ ಹತ್ತಿರದ ಜನತಾನಗರದ ಕಸ್ತುರಬಾಗಾಂಧಿ ಬಾಲಿಕಾ ವಸತಿಸಹಿತ ಹಿರಿಯ ಪ್ರಾಥಮಿಕ ಶಾಲೆ 18ವಿದ್ಯಾರ್ಥಿನಿಯರು ಅಸ್ವಸ್ತಗೊಂಡಿದ್ದಾರೆ.

ತಲೆ ಸುತ್ತುವುದು ಮತ್ತು ವಾಂತಿಯಾದ ಹಿನ್ನೆಲೆಯಲ್ಲಿ ಹುಮನಾಬಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಸಿ.ಎಂ.ಒ ಅವರ ನೇತೃತ್ವದಲ್ಲಿ ತಜ್ಞವೈದ್ಯ ಡಾ.ಬಸವಂತರಾವ ಗುಮ್ಮೆದ ಚಿಕಿತ್ಸೆಯನ್ನು ಕೊಡಲಾಗಿದ್ದು, ಈಗ ಕೊಂಚ ಗುಣಮುಖರಾಗಿದ್ದು 3ಗಂಟೆಯೊಳಗೆ ಮಕ್ಕಳನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ಡಾ.ನಾಗನಾಥ ಹುಲಸೂರೆ ತಿಳಿಸಿದರು.

ಡಾ.ವಿಶ್ವ ಸೈನಿರ್, ಬಿಇಒ ಶಿವಗುಂಡಪ್ಪ ಸಿದ್ದಣ್ಗೋಳ್, ಬಿ.ಆರ್.ಸಿ ಶಿವಕುಮಾರ ಪಾರಶೆಟ್ಟಿ, ವಸತಿ ಶಾಲೆ ಪ್ರಾಚಾರ್ಯೆ ಸುಜಾತಾ ಬಡಿಗೇರ ಮತ್ತಿತರರು ಹಾಜರಿದ್ದರು.
ಈ ವೇಳೆ ವ್ಯಾಕ್ಸಿನ್ ಪಡೆದು ಯಾವುದೇ ಅಡ್ಡ ಪರಿಣಾಮವಾಗದೇ ಗುಣಮುಖಳಾದ ವಿದ್ಯಾರ್ಥಿನಿ ಯೋಗಿತಾ ಇತರೆ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿ ಗಮನಸೆಳೆದಳು.

Share This Article
";