ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವು

ಉಮೇಶ ಗೌರಿ (ಯರಡಾಲ)

ಅಥಣಿ : ಸಾರಿಗೆ ಬಸ್ ಹಾಗೂ ಬೈಕ್ ಮದ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಅಥಣಿ ನಗರದ ಹೊರವಲಯದಲ್ಲಿ ಸೋಮವಾರ ಸಂಭವಿಸಿದೆ.

ಅಥಣಿ ತಾಲೂಕಿನ ಯಲಹಡಲಗಿ ಗ್ರಾಮದ ಕುಮಾರ ಸಂಗಪ್ಪ ಮಗದುಮ್ಮ(33)‌ ಮೃತ ಸವಾರ ಎಂದು ಗುರುತಿಸಲಾಗಿದ್ದು ಮೀರಜ್ ನಲ್ಲಿರುವ ಸಂಬಂಧಿಕರ ಮನೆಗೆ ತೆರಳುವಾಗ ಈ ಘಟನೆ ಸಂಭವಿಸಿದೆ.ಈ ಕುರಿತು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಅಬ್ಬಾಸ ಮುಲ್ಲಾ

Share This Article
";