ಫೆ.‌11ಕ್ಕೆ ಚನ್ನಮ್ಮನ ಕಿತ್ತೂರು ನೂತನ ಬಸ್ ಘಟಕದ ಶಂಕು ಸ್ಥಾಪನಾ ಸಮಾರಂಭ

ಉಮೇಶ ಗೌರಿ (ಯರಡಾಲ)

ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗದ ಚನ್ನಮ್ಮನ ಕಿತ್ತೂರು ನೂತನ ಬಸ್ ಘಟಕದ ಶಂಕು ಸ್ಥಾಪನಾ ಸಮಾರಂಭ (ನಾಳೆ) ಫೆ.11 ರಂದು ಮಧ್ಯಾಹ್ನ 3 ಗಂಟೆಗೆ ನೂತನ ಬಸ್ ಘಟಕದಲ್ಲಿ ಜರಗುಲಿದೆ.

ಚನ್ನಮ್ಮನ ಕಿತ್ತೂರು, ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳು,  ಪಂಚಾಕ್ಷರಿ ಮಹಾಸ್ವಾಮಿಗಳು ಗುರು ಮಡಿವಾಳೇಶ್ವರ ಮಠ, ಇವರು ದಿವ್ಯ ಸಾನಿಧ್ಯ ವಹಿಸುವವರು.ಜಲಸಂಪನ್ಮೂಲ(ಭಾರಿ ಮತ್ತು ಮಧ್ಯಮ ನೀರಾವರಿ) ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಘನ ಉಪಸ್ಥಿತಿ ವಹಿಸುವವರು.ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಬಿ. ಶ್ರೀರಾಮುಲು ಅವರು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.ಅರಣ್ಯ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಉಮೇಶ ವಿ. ಕತ್ತಿ ಅವರು ಭೂಮಿ ಪೂಜೆ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಮುಜರಾಯಿ, ಹಜ್ ಹಾಗೂ ವಕ್ಸ್ ಸಚಿವರಾದ ಶಶಿಕಲಾ ಜೊಲ್ಲೆ, ಅಧ್ಯಕ್ಷತೆಯನ್ನು ಶಾಸಕ ಮಹಾಂತೇಶ ದೊಡ್ಡಗೌಡರ ನೂತನ ಮಾರ್ಗದ ಚಾಲನೆಯನ್ನು ಹುಬ್ಬಳ್ಳಿಯ ವಾ.ಕ.ರ.ಸಾ. ಸಂಸ್ಥೆ, ಕೇಂದ್ರ ಕಛೇರಿ ಅಧ್ಯಕ್ಷರಾದ ವ್ಹಿ.ಎಸ್.ಪಾಟೀಲ, ವಿಶೇಷ ಆಮಂತ್ರಿತರಾಗಿ ಉಪ ಸಭಾಧ್ಯಕ್ಷರಾದ ವಿಶ್ವನಾಥ (ಆನಂದ) ಮಾಮನಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ, ಅಧ್ಯಕ್ಷ ದುರ್ಯೋಧನ ಐಹೊಳೆ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ ಸೇರಿದಂತೆ ಶಾಸಕರು ಹಾಗೂ ಅಧಿಕಾರಿಗಳು ಉಪಸ್ಥಿತರಿರವರು.

Share This Article
";