ಆಮ್ ಆದ್ಮಿ ಸದಸ್ಯತ್ವ ಅಭಿಯಾನಕ್ಕೆ ಎಎಪಿ ಯುವ ಮುಖಂಡ ಆನಂದ ಹಂಪಣ್ಣವರ ಚಾಲನೆ

ಉಮೇಶ ಗೌರಿ (ಯರಡಾಲ)

ಚನ್ನಮ್ಮನ ಕಿತ್ತೂರ: ದೆಹಲಿ ಮತ್ತು ಪಂಜಾಬ್‌ನಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ  ಆಮ್ ಆದ್ಮಿ ಪಕ್ಷದ ಸರ್ಕಾರಗಳು ಜನಪರ ಯೋಜನೆಗಳನ್ನು ತರುವುದರ ಮೂಲಕ  ಆಮ್ ಆದ್ಮಿ ಭಾರತದ ತುಂಬಾ ಅತಿ ವೇಗವಾಗಿ ಬೆಳೆಯುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಆನಂದ ಹಂಪಣ್ಣವರ ಅವರು ಇಂದು ಪಟ್ಟಣದ ಅರಳಕಟ್ಟಿ ಸರ್ಕಲನಲ್ಲಿ ಆಮ್ ಆದ್ಮಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಆಮ್ ಆದ್ಮಿ ಪಕ್ಷದ ಸದಸ್ಯತ್ವ ಪಡೆಯುತ್ತಿರುವ ಸಾರ್ವಜನಿಕರು

ಕಿತ್ತೂರು ಮತಕ್ಷೇತ್ರದ ಆಮ್ ಆದ್ಮಿ ಮುಖಂಡ ಆನಂದ ಹಂಪಣ್ಣವರ ಇಂದು ಚಾಲನೆ ಮಾಡುತ್ತಿದ್ದಂತೆ ಜನರು ಸ್ವ ಇಚ್ಛೆಯಿಂದ ತಾವಾಗಿಯೆ ಬಂದು ತಮ್ಮ ತಮ್ಮ ಸದಸ್ಯತ್ವವನ್ನು ಪಡೆದುಕೊಳ್ಳುತ್ತಿದ್ದಾರೆ. ಬೆಲೆ ಏರಿಕೆ, ಧರ್ಮ ಧರ್ಮಗಳ ನಡುವಿನ ವೈಷಮ್ಯ, ಭ್ರಷ್ಟಾಚಾರ, ಸೇರಿದಂತೆ ಇನ್ನೂ ಅನೇಕ ಕಾರಣಗಳಿಗೆ ಬೇಸತ್ತು ಮುಂಬರುವ ದಿನಗಳಲ್ಲಿ ಕಿತ್ತೂರು ಮತಕ್ಷೇತ್ರದ ಮತದಾರರು ಆಮ್ ಆದ್ಮಿ ಪಕ್ಷದ ಪೊರಕೆಯನ್ನು ಹಿಡಿಯಲಿದ್ದಾರೆ ಎಂದರು ಸುಮಾರು 200 ಜನರು ಆಮ್ ಆದ್ಮಿ ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡರು ಎಂದು ತಿಳಿಸಿದರು.

ಆಮ್ ಆದ್ಮಿ ಪಕ್ಷದ ಸದಸ್ಯತ್ವ ನೀಡುತ್ತಿರುವ ಎಎಪಿ ಮುಖಂಡ ಆನಂದ ಹಂಪಣ್ಣವರ

ಈ ವೇಳೆ ಆಮ್ ಆದ್ಮಿಯ ಅನಿಲ ಅಮಾತಿ, ರಾಜು ಹಂಪಣ್ಣವರ, ಸಂತೋಷ, ವಿನೋದ, ರುದ್ರಪ್ಪ ಸೇರಿದಂತೆ ಇನ್ನೂ ಅನೇಕ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಇದ್ದರು.

Share This Article
";