Saturday, July 20, 2024

ಅಪ್ರಾಪ್ತೆ ವಿದ್ಯಾರ್ಥಿನಿ ಮೇಲೆ ಬಲತ್ಕಾರ : ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹ.

ಬೈಲಹೊಂಗಲ ಅ.13: ಅಪ್ರಾಪ್ತೆ ವಿದ್ಯಾರ್ಥಿಯೊಬ್ಬಳನ್ನು ಪುಸಲಾಯಿಸಿ ಆಕೆಯ ಮೇಲೆ ಬಲತ್ಕಾರ ಮಾಡಿರುವ ಆರೋಪಿಯನ್ನು ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ನಾನಾ ಮುಸ್ಲಿಂ ಸಂಘಟನೆಗಳು ಉಪವಿಭಾಗಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ.

ನ್ಯಾಯವಾದಿ ಆಲಮ್ ಕಾರೆಕಾಜೀ, ಮುಸ್ಲಿಂ ಸಮಾಜದ ಮುಖಂಡ ಅಖ್ತರ್ ತಾಳಿಕೋಟಿ ಮಾತನಾಡಿ, ಅ.12 ರಂದು 17 ವರ್ಷದ ಅಪ್ರಾಪ್ತೆ ವಿದ್ಯಾರ್ಥಿನಿಯು ಕಾಲೇಜಿಗೆ ತೆರಳಲು ಬೈಲಹೊಂಗಲ ಬಸ್ ನಿಲ್ದಾಣಕ್ಕೆ ಬಂದಾಗ ಆಕೆಯನ್ನು ಧಮಕಿಯಿಂದ ಬ್ಲಾಕ್‌ಮೇಲ್ ಮಾಡಿ ಪಟ್ಟಣದ ಸಂಸ್ಕೃತ ಲಾಡ್ಜ್ಗೆ ಕರೆದುಕೊಂಡು ಹೋಗಿ ಒತ್ತಾಯ ಪೂರ್ವಕವಾಗಿ ಬಲತ್ಕಾರ ಮಾಡಿರುವುದು ತೀವ್ರ ಖಂಡನೀಯ.

ಆರೋಪಿ ಮುರಗೋಡ ಗ್ರಾಮದ ರಘು ರಾಯಭಾಗ ಇತನ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಪ್ರತಿನಿತ್ಯ ಸಾಕಷ್ಟು ಅಪ್ರಾಪ್ತ ವಿದ್ಯಾರ್ಥಿನೀಯರು ವಿದ್ಯಾಭ್ಯಾಸಕ್ಕಾಗಿ ಪಟ್ಟಣದ ಶಾಲೆ, ಕಾಲೇಜುಗಳಿಗೆ ಬರುತ್ತಿದ್ದು, ರಘುನಂತಹ ಅಪರಾಧಿಯ ನೀಚ ಕೆಲಸದಿಂದ ಪಾಲಕರಲ್ಲಿ ಭಯ ಹುಟ್ಟುತ್ತಿದೆ. ತಮ್ಮ ಮಕ್ಕಳನ್ನು ಶಾಲೆ, ಕಾಲೇಜುಗಳಿಗೆ ಕಳುಹಿಸಲು ಹಿಂದೆಟ್ಟು ಹಾಕುತ್ತಿದ್ದಾರೆ. ಇದರಿಂದ ವಿದ್ಯಾರ್ಥಿನೀಯರ ಭವಿಷ್ಯ ಹಾಳಾಗುತ್ತಿದೆ.

ರಘು ಮಾಡಿರುವ ಅಪರಾಧವು ಮನು ಕುಲಕ್ಕೆ ಧಕ್ಕೆ ತರುವಂತ ಕೆಲಸವಾಗಿದೆ. ಇಂತಹ ನೀಚ ಕೆಲಸ ಯಾರೂ ಮಾಡಬಾರದೆಂದರೆ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಬೇಕು.

ಅಪ್ರಾಪ್ತ ಬಾಲಕಿಯನ್ನು ಲಾಡ್ಜನಲ್ಲಿ ಅವಳ ಯಾವುದೇ ಪುರಾವೆ ಇಲ್ಲದೇ ರೂಮ ನೀಡಿದ ಲಾಡ್ಜ್ದ ಮಾಲಿಕ ಮತ್ತು ಅಲ್ಲಿ ಕೆಲಸ ಮಾಡುವ ಜನರಿಗೆ ಸಹ ಶಿಕ್ಷೆ ಆಗಬೇಕೆಂದರು.

ಈ ಸಂದರ್ಭದಲ್ಲಿ ಅಮನ ಹೊಂಗಲ, ಹಾಶಿಂ ಚಂಪೂ, ಶಾಹಿದ ಹಂಚಿನಮನಿ, ಶರ್ಫಜ ಬಾಗೇವಾಡಿ, ಇಮ್ರಾನ ಕಿತ್ತೂರ, ಜಾಫರ ಕೌಜಲಗಿ, ಬುಡ್ಡೆಸಾಬ ದಾಸ್ತಿಕೊಪ್ಪ, ಅಬೂಬಕರ ತಲ್ಲೂರ, ನ್ಯಾಮತ ಮಕಾನದಾರ, ಫಯಾಜ ಬುಡರಕಟ್ಟಿ, ಶಬ್ಬೀರ ಬಾಗವಾನ, ಇಮ್ರಾನ್ ತಿಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬಲತ್ಕಾರ ಮಾಡಿದ ಅಪರಾಧಿಗಳಿಗೆ ತಕ್ಕ ಶಿಕ್ಷೆ ಆಗಬೇಕಾದರೆ ನ್ಯಾಯವಾದಿಗಳ ಸಂಘದಿಂದ ಅಪರಾಧಿಯ ಪರವಾಗಿ ಯಾರು ವಕಾಲತ್ತು ವಹಿಸಬಾರದೆಂದು ಮನವಿ ಮಾಡಿದ್ದಾರೆ. ತಾವುಗಳು ಎಲ್ಲ ಜ್ಞಾನ ಹೊಂದಿದವರು ಇಂತಹ ನೀಚ ಕೆಲಸ ಮಾಡಿದವರ ಪರವಾಗಿ ಯಾವತ್ತೂ ನಿಲ್ಲುವುದಿಲ್ಲ ಅಂತಾ ನಮ್ಮ ಅನಿಸಿಕೆ ಇದೆ. ಅದಕ್ಕೆ ತಾವುಗಳು ಸ್ಪಂದಿಸುತ್ತಿರೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!