Saturday, July 20, 2024

ಬಾಳೇಕುಂದರಗಿ ಸಹಕಾರ ಪೆನಲ್‌ಗೆ ಬೆಂಬಲ: ಮಾಜಿ ಶಾಸಕ ವ್ಹಿ.ಆಯ್.ಪಾಟೀಲ.

ಬೈಲಹೊಂಗಲ: ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಚುನಾವಣೆ ರಂಗೇರುತ್ತಿದೆ.  ಮಾಜಿ ಶಾಸಕರಾದ ಡಾ. ವಿಶ್ವನಾಥ. ಆಯ್. ಪಾಟೀಲ ಅವರು ಬಾಳೇಕುಂದರಗಿ ಸಹಕಾರ ಪೆನಲ್‌ಗೆ ಬೆಂಬಲ ನೀಡಿದರು.

ಇಂದು ಸಾಯಂಕಾಲ  ಡಾ. ವಿಶ್ವನಾಥ. ಆಯ್. ಪಾಟೀಲ ಅವರು ವಿದ್ಯಾನಗರದ ಗೃಹ ಕಚೇರಿಯಲ್ಲಿ ಅವರ ಬೆಂಬಲಿಗರ ಸಭೆ ಕರೆದು ಮಾತನಾಡಿ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಅಭಿವೃದ್ದಿ ಹೊಂದಲು ಹಾಗೂ ರೈತರಿಗೆ ಉತ್ತಮ ಆಡಳಿತ ನೀಡಲು ಬಸವರಾಜ ಬಾಳೇಕುಂದರಗಿ ಅವರಿಂದ ಮಾತ್ರ ಸಾಧ್ಯ. ಆದ್ದರಿಂದ ಬಾಳೇಕುಂದರಗಿ ಸಹಕಾರ ಪೆನಲ್‌ಗೆ ಬೆಂಬಲಿಸಿ ಅವರನ್ನು ಆಯ್ಕೆ ಮಾಡಲು ಶ್ರಮಿಸಿ ಎಂದು ಬೆಂಬಲಿಗರಿಗೆ ಹಾಗೂ ಕಾರ್ಯಕರ್ತರಿಗೆ ಕರೆ ನೀಡಿದರು. 

ಈ ಸಂದರ್ಭದಲ್ಲಿ ಕಾರ್ಖಾನೆಯ ಮಾಜಿ ಅಧ್ಯಕ್ಷರಾದ ಬಸವರಾಜ ರಮೇಶ ಬಾಳೇಕುಂದರಗಿ ಅವರು ಮಾತನಾಡಿ ರೈತರ ಏಳಿಗೆಗಾಗಿ, ಕಾರ್ಖಾನೆ & ಕಾರ್ಮಿಕರ ಅಭಿವೃದ್ಧಿಗಾಗಿ ಬಾಳೇಕುಂದರಗಿ ಸಹಕಾರ ಪೆನಲಿನ್‌ ಅಭ್ಯರ್ಥಿಗಳಿಗೆ ಮತ ನೀಡುವುದರ ಮೂಲಕ ವಿಜಯಶಾಲಿಯನ್ನಾಗಿಸಬೇಕು ಮತ್ತು ಬೆಂಬಲಿಸಬೇಕೆಂದು ವಿನಂತಿಸಿದರು.

ಈ ವೇಳೆ ಬಾಳೇಕುಂದರಗಿ ಸಹಕಾರ ಪೆನಲಿನ್‌ ಎಲ್ಲ ಅಭ್ಯರ್ಥಿಗಳು ಮತ್ತು ಮಾಜಿ ಶಾಸಕ ವ್ಹಿ.ಆಯ್.ಪಾಟೀಲ.ಅವರ ಬೆಂಬಲಿಗರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 

ಜಿಲ್ಲೆ

ರಾಜ್ಯ

error: Content is protected !!