Thursday, September 12, 2024

ಬೆಳಗಾವಿಯಲ್ಲಿ ಭೀಕರ ಕೊಲೆ! ಮೊಬೈಲ್‌ಗಾಗಿ ಎಣ್ಣೆ ಕಿಕ್‌ನಲ್ಲಿ ಯುವಕನ ಎದೆಗೆ ಚೂರಿ ಹಾಕಿದ ಆಂಟಿ!

ಬೆಳಗಾವಿ: ಜಾತ್ರೆಯ ಹಿನ್ನೆಲೆಯಲ್ಲಿ ಹೊಸ ಬಟ್ಟೆ ಖರೀದಿಗೆ ಹೋಗಿದ್ದ ಯುವಕನ ಬಳಿ, ಮದ್ಯಪಾನ ಮಾಡಿದ್ದ ಮಹಿಳೆಯೊಬ್ಬಳು ಬಂದು ಮೊಬೈಲ್‌ ಕೊಡುವಂತೆ ಕೇಳಿದ್ದಾಳೆ. ಯಾವ ಮೊಬೈಲ್‌ ಎಂದು ಪ್ರಶ್ನೆ ಮಾಡಿದ್ದಕ್ಕೆ ಸೀದಾ ಯುವಕನ ಎದೆಗೆ ಚೂರಿ ಚುಚ್ಚಿ ಮೊಬೈಲ್ ಕಿತ್ತುಕೊಂಡು ಪರಾರಿ ಆಗಿದ್ದಾಳೆ. ಆದರೆ, ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವ ಉಂಟಾಗಿದ್ದ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. 

ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಕೊಲೆಯಾದ ಘಟನೆಯನ್ನು ನಾವು ನೋಡಿದ್ದೇವೆ. ಆದರೆ, ಇಲ್ಲಿ ಒಬ್ಬರಿಗೊಬ್ಬರು ಯಾವುದೇ ಸಂಬಂಧವೇ ಇಲ್ಲ. ಆದರೆ, ಮೊಬೈಲ್‌ ಕಸಿದುಕೊಳ್ಳಲು ಚೂರಿ ಹಿಡಿದುಕೊಂಡು ಬಂದ ಮದ್ಯವ್ಯಸನಿ ಮಹಿಳೆಯೊಬ್ಬಳು ಮೊಬೈಲ್‌ ಕೊಡದೇ ಪ್ರಶ್ನೆ ಮಾಡಿದ ಯುವಕನ ಎದೆಗೆ ಚೂರಿಯನ್ನು ಚುಚ್ಚಿದ್ದಾಳೆ. ಅದು ಕೂಡ ಹರಿತವಾದ ಚೂರಿಯಿಂದ ಒಮ್ಮೆಲೇ ಹೃದಯವೇ ಚೂರಾಗುವಂತೆ ಚುಚ್ಚಿದ್ದು, ಕೆಲವೇ ಕ್ಷಣಗಳಲ್ಲಿ ತೀವ್ರ ರಕ್ತಸ್ರಾವ ಉಂಟಾಗಿ ಯುವಕ ಒದ್ದಾಡಿ ಪ್ರಾಣವನ್ನು ಬಿಟ್ಟಿದ್ದಾನೆ.

ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ನಿವಾಸಿ ನಾಗರಾಜ್  ಪಾಟೀಲ್ (25) ಕೊಲೆಯಾದ ಮೃತ ಯುವಕನಾಗಿದ್ದಾನೆ. ಭೀಕರವಾಗಿ ಯುವಕನನ್ನು ನಡು ರಸ್ತೆಯಲ್ಲೇ ಮೊಬೈಲ್‌ ಆಸೆಗೆ ಕೊಲೆ ಮಾಡಿದ ಮಹಿಳೆಯನ್ನು ಕಂಗ್ರಾಳಿ ಗ್ರಾಮದ ನಿವಾಸಿ ಜಯಶ್ರೀ ಪವಾರ್ (40) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ (ಭಾನುವಾರ) ಬೆಳಗಾವಿಯ ಚವ್ಹಾಟ್ ಗಲ್ಲಿಯಲ್ಲಿ ಈ ದುರ್ಘಟನೆ ನಡೆದಿದೆ. ಇನ್ನು ಮೃತ ಯುವಕ ನಾಗರಾಜ್‌ ಮಹಾರಾಷ್ಟ್ರದ ಕರಾಡ್‌ನಲ್ಲಿ ಗೌಂಡಿ (ಕಟ್ಟಡ ನಿರ್ಮಾಣ) ಕೆಲಸ ಮಾಡುತ್ತಿದ್ದನು. ಆದರೆ, ಸ್ವಗ್ರಾಮ ತಾರಿಹಾಳದಲ್ಲಿ ರಾಮೇಶ್ವರ ದೇವರ ಜಾತ್ರೆಗೆ ಆಗಮಿಸಿದ್ದ ವೇಳೆ ದುರಂತ ಸಾವನ್ನಪ್ಪಿದ್ದಾನೆ. 

 ಜಾತ್ರೆಯ ನಿಮಿತ್ತ ಸ್ವಗ್ರಾಮಕ್ಕೆ ಬಂದಿದ್ದ ನಾಗರಾಜ್‌ ಭಾನುವಾರ ಸ್ನೇಹಿತನ ಜೊತೆ ಬಟ್ಟೆ ತರಲು ಬೆಳಗಾವಿ ನಗರಕ್ಕೆ ಹೋಗಿದ್ದನು. ಈ ವೇಳೆ ಬೆಳಗಾವಿಯ ಚವ್ಹಾಟ ಗಲ್ಲಿ ಕಾರ್ನರ್‌ನಲ್ಲಿ ಸ್ನೇಹಿತನ ಜೊತೆ ನಿಂತುಕೊಂಡಿದ್ದನು. ಆಗ ಈ ಯುವಕರು ನಿಂತಿದ್ದ ಸ್ಥಳಕ್ಕೆ ಆಗಿಸಿದ ಮದ್ಯವ್ಯಸನಿ ಜಯಶ್ರೀ ಮೊಬೈಲ್ ಕೊಡುವಂತೆ ಚಾಕು ತೋರಿಸಿ ಕಿರಿಕ್ ಮಾಡಿದ್ದಾಳೆ. ಇನ್ನು ದಷ್ಟಪುಷ್ಟನಾಗಿದ್ದ ಯುವಕ ಯಾವ ಮೊಬೈಲ್? ನಾನ್ಯಾಕೆ ಕೊಡಬೇಕು ಎಂದು ಪ್ರಶ್ನೆ ಮಾಡಿದ್ದಾನೆ. ಯುವಕ ತನಗೇ ಮೊಬೈಲ್‌ ಕೊಡದೆ ಪ್ರಶ್ನೆ ಮಾಡುತ್ತಿದ್ದಾನೆ ಎಂದು ಮಹಿಳೆ ಜಯಶ್ರೀ ಚಾಕುವಿನಿಂದ ನಾಗರಾಜ ಎದೆಗೆ ಚುಚ್ಚಿದ್ದಾಳೆ.

ಇನ್ನು ಆರೋಪಿ ಜಯಶ್ರೀ ಪವಾರ್‌ ಮೊಬೈಲ್‌ ಕೊಡದ ಯುವಕ ನಾಗರಾಜ್‌ನ ಎದೆಯ ಎಡಭಾಗದಲ್ಲಿಯೇ ಚಾಕುವನ್ನು ಚುಚ್ಚಿದ್ದಾಳೆ. ಇನ್ನು ಹರಿತವಾದ ಮತ್ತು ಉದ್ದನೆಯ ಚಾಕು ಸೀದಾ ಹೃದಯದ ರಕ್ತನಾಳವನ್ನೇ ತುಂಡರಿಸಿದೆ. ಇನ್ನು ಯುವಕನ ಎದೆಗೆ ಚುಚ್ಚಿದ ಚಾಕು ತೆಗೆದ ತಕ್ಷಣವೇ ತೀವ್ರ ರಕ್ತಸ್ರಾವ ಉಂಟಾಗಿದೆ. ಕೂಡಲೇ ಮಹಿಳೆ ಮೊಬೈಲ್‌ ಕಸಿದುಕೊಂಡು ಪರಾರಿ ಆಗಿದ್ದಾಳೆ. ಕೂಡಲೇ ಪಕ್ಕದಲ್ಲಿದ್ದ ಸ್ನೇಹಿತ ಗಾಯಾಳು ನಾಗರಾಜ್‌ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ, ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಾಗರಾಜ್ ಸಾವನ್ನಪ್ಪಿದ್ದಾನೆ. ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. 

 

 

ಜಿಲ್ಲೆ

ರಾಜ್ಯ

error: Content is protected !!