Wednesday, September 11, 2024

ಮುರುಗೇಶ ಎಂದರೆ ನಿರಾಣಿ ಅಲ್ಲ, ನೀರಾವರಿ : ಪಿ. ಎಚ್. ಪೂಜಾರ. ಕಾಡರಕೊಪ್ಪ ಗ್ರಾಮದಲ್ಲಿ ಮೊಳಗಿದ ಕೆಸರಿ ಕಹಳೆ

ಬಾದಾಮಿ: ತಾಲೂಕಿನ ಮಹತ್ವಾಕಾಂಕ್ಷೆಯ ನೀರಾವರಿ ಯೋಜನೆಗಳಾದ ಅನವಾಲ ಮತ್ತು ಕಾಡರಕೊಪ್ಪ ಯೋಜನೆಗಳನ್ನು ಮುಂಬರುವ ೧೮ ತಿಂಗಳುಗಳಲ್ಲಿ ಪೂರ್ಣಗೊಳಿಸಿ ಈ ನೆಲವನ್ನು ಸಂಪೂರ್ಣ ಹಸಿರಾಗಿಸುವ ಸಂಕಲ್ಪ ನನ್ನದಾಗಿದೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.
ಬಾದಾಮಿ ತಾಲೂಕಿನ ಕಾಡರಕೊಪ್ಪ ಗ್ರಾಮದಲ್ಲಿ ನಡೆದ ನಾಗರಿಕ ಅಭಿನಂದನಾ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಬಾದಾಮಿ ತಾಲೂಕಿನ ಮಣ್ಣು ಫಲವತ್ತಾಗಿದೆ. ನಮ್ಮ ರೈತರಿಗೆ ನೀರು ಮತ್ತು ವಿದ್ಯುತ್ ನೀಡಿದ್ದೇ ಆದಲ್ಲಿ ಅವರು ಶ್ರಮಪಟ್ಟು ದುಡಿದು ಆರ್ಥಿಕವಾಗಿ ಸದೃಢರಾಗುತ್ತಾರೆ. ೨೦೦೮ ರಿಂದ ಇಲ್ಲಿಯವರೆಗೆ ಹೆರಕಲ್ ನೀರಾವರಿ ಯೋಜನೆಗಳು ಸೇರಿದಂತೆ ಕೆರೂರು, ಅನವಾಲ ಹಾಗೂ ಕಾಡರಕೊಪ್ಪ ಏತ ನೀರಾವರಿ ಯೋಜನೆಗಳನ್ನು ತಂದು ಈ ಭಾಗದಲ್ಲಿ ೧.೨೭ ಲಕ್ಷ ಹೊಸ ನೀರಾವರಿ ಕ್ಷೇತ್ರ ಸೃಷ್ಟಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ. ಕೈನಕಟ್ಟಿಯಲ್ಲಿ ಹೊಸ ೧೧೦ ಕೆ.ವಿ.ಎ ವಿದ್ಯುತ್ ಕೇಂದ್ರ ಸ್ಥಾಪಿಸುವ ಮೂಲಕ ನಮ್ಮ ರೈತರಿಗೆ ಹಗಲು ವೇಳೆ ೭ ಗಂಟೆ ತ್ರಿಫೇಸ್ ವಿದ್ಯುತ್ ನೀಡುವ ಕಾರ್ಯ ನಡೆಯುತ್ತಿದೆ. ವಿರೋಧಿಗಳ ಅಪಪ್ರಚಾರಕ್ಕೆ ಪ್ರಜ್ಞಾವಂತ ನಾಗರಿಕರು ಕಿವಿಗೊಡದೇ ನನಗೆ ಮತ್ತೊಮ್ಮೆ ಆಶಿರ್ವಾದ ಮಾಡುವ ಮೂಲಕ ನನ್ನ ಕನಸಿನ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಲು ಅವಕಾಶ ಮಾಡಿಕೊಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.
ಕಾಡರಕೊಪ್ಪ ಗ್ರಾಮದ ಪ್ರಗತಿ ಪರ ರೈತ ಹಾಗೂ ಭಾಜಪ ಮುಖಂಡ ಆರ್. ಆರ್. ನಾಯ್ಕ ಮಾತನಾಡಿ ನಮ್ಮ ಭೂಮಿಗೆ ನೀರು ನೀಡುವ ಮೂಲಕ ಬಾದಾಮಿ ರೈತನ ಬದುಕಿಗೆ ಹೊಸ ಅರ್ಥವನ್ನು ಕೊಟ್ಟಿದ್ದಾರೆ. ಕಾಡರಕೊಪ್ಪ ಯೋಜನೆ ಅನುಮೋದನೆಗೊಂಡ ದಿನ ನಮ್ಮ ಗ್ರಾಮದಲ್ಲಿ ದೀಪಾವಳಿ ಸಂಭ್ರಮವಿತ್ತು. ಈ ಸಂತೋಷಕ್ಕೆ ಮುರುಗೇಶ ನಿರಾಣಿ ಕಾರಣ ಈ ಬಾರಿ ನಮ್ಮ ಗ್ರಾಮದಿಂದ ಅವರನ್ನು ಪಕ್ಷಾತೀತ ಹಾಗೂ ಜ್ಯಾತ್ಯಾತೀತವಾಗಿ ಬೆಂಬಲಿಸುತ್ತೇವೆ. ೨೦೦೮ರಲ್ಲಿ ಕ್ಷೇತ್ರ ಮರುವಿಂಗಡನೆಯಲ್ಲಿ ಬಾದಾಮಿ ಹಳ್ಳಿಗಳು ಬೀಳಗಿ ಮತಕ್ಷೇತ್ರಕ್ಕೆ ಸೇರ್ಪಡೆಯಾದಾಗ ದೂರ ಎಂಬ ಭಯವಿತ್ತು ಆದರೆ ಮುರುಗೇಶ ನಿರಾಣಿ ಈಗ ನಮ್ಮ ಹೃದಯಕ್ಕೆ ಬಹಳ ಹತ್ತಿರವಾಗಿದ್ದಾರೆ ಎಂದರು.
ವಿ.ಪ. ಸದಸ್ಯ ಪಿ. ಎಚ್. ಪೂಜಾರಿ ಮಾತನಾಡಿ ಮುರುಗೇಶ ನಿರಾಣಿ ಎಂದರೆ ವಿನಯವಂತ. ಅವರ ದೂರದೃಷ್ಟಿಯ ಯೋಜನೆಗಳು ಕೇವಲ ಬೀಳಗಿ, ಬಾಗಲಕೋಟೆಯಲ್ಲ, ಇಡೀ ಕರ್ನಾಟಕಕ್ಕೆ ಫಲ ಕೊಟ್ಟಿವೆ. ಅವರ ನೀರಾವರಿ ಕಾಳಜಿ ಅಗಾಧವಾದದ್ದು. ಬಾದಾಮಿ ತಾಲೂಕು ನೀರಾವರಿ ಮಾಡಬೇಕೆನ್ನುವ ಅವರ ಉತ್ಕಟ ಅಭಿಲಾಷೆ ತುಂಬ ದೊಡ್ಡದು. ಅವರ ಸರನೇಮ್ ನಿರಾಣಿ ಅಲ್ಲ, ಅದು ನೀರಾವರಿ ಎಂದು ಅವರು ಸಭೆಯಲ್ಲಿ ಘೋಷಿಸಿದಾಗ ನೆರೆದ ಜನ ಚಪ್ಪಾಳೆ ಹೊಡೆದು ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ಕಲಾದಗಿ, ಜಲಗೇರಿ ಹಾಗೂ ನಂದಕೇಶ್ವರ ಜಿ.ಪಂ.ವ್ಯಾಪ್ತಿಯ ಗ್ರಾಮಸ್ಥರು ಅನವಾಲ ಹಾಗೂ ಕಾಡರಕೊಪ್ಪ ಯೋಜನೆ ಜಾರಿಗೊಳಿಸಿದ್ದಕ್ಕಾಗಿ ಮುರುಗೇಶ ನಿರಾಣಿಯವರಿಗೆ ನಾಗರಿಕ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ವಿ.ಪ.ಸದಸ್ಯ ಹಣಮಂತ ನಿರಾಣಿ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ರನ್ನ ಸಹಕಾರಿ ಕಾರ್ಖಾನೆ ಮಾಜಿ ಅಧ್ಯಕ್ಷ ಲಕ್ಷö್ಮಣ ತಳೆವಾಡ, ಆನಂದರಾವ್ ದೇಸಾಯಿ, ಗಿರೀಶಗೌಡ ಪಾಟೀಲ, ಹಣಮಂತಗೌಡ ಗೌಡರ್, ತಿಮ್ಮಣ್ಣ ಅಮಲಝೇರಿ, ವೆಂಕನಗೌಡ ದಂಡನವರ, ಕೃಷ್ಣಾ ನಾಡಗೌಡ, ಪ್ರಶಾಂತ ಹುಣಸಿಕಟ್ಟಿ, ಹೂವಪ್ಪ ರಾಠೋಡ ಉಪಸ್ಥಿತರಿದ್ದರು.
ಕಾಂಗ್ರೇಸ್ ತೊರೆದು ಬಿಜೆಪಿ ಸೇರ್ಪಡೆ: ಮುರುಗೇಶ ನಿರಾಣಿಯವರ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೇಸ್ ಪಕ್ಷದ ಮುಖಂಡರುಗಳಾದ ಶಿವಪ್ಪ ಚಿಕ್ಕೂರ ಹಾಗೂ ಹೊಳಬಸು ಚಿಕ್ಕೂರ ನೇತೃತ್ವದಲ್ಲಿ ಶಂಕರಗೌಡ ನಾಯ್ಕ, ಪಾಂಡಪ್ಪ ಮುದ್ನೂರ, ಮುತ್ತಪ್ಪ ಅರಕೇರಿ, ವೆಂಕಟೇಶ ನಾಯ್ಕ, ಹಣಮಂತ ಮಿರ್ಜಿ, ಹಣಮಂತ ಗಲಗಲಿ, ಆನಂದ ನಾಯ್ಕ, ಅಮಿತ ಯರಗಟ್ಟಿ, ನಿಂಗಪ್ಪ ಸಂಗರಡ್ಡಿ, ಸದಾಶಿವ ಪೂಜೇರಿ, ಸಂಗಪ್ಪ ಅರಳಿಮಟ್ಟಿ, ಶಂಕರಗೌಡ ಹಳ್ಳಿಮನಿ, ಪಾಂಡಪ್ಪ ವಾಸನದ, ರಂಗಣ್ಣ ಕಳಸಗೊಪ್ಪ, ರಫಿಕ ಗುದಗಿ, ಸುಭಾಷ ಕೋಟಿ ಅನೇಕರು ಬಿಜೆಪಿ ಸೇರ್ಪಡೆಯಾದರು.

ಜಿಲ್ಲೆ

ರಾಜ್ಯ

error: Content is protected !!