Friday, September 13, 2024

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಕುರಿತು ಶಿವಕುಮಾರ್ ಸ್ವಾಮಿ ಅವಮಾನಕರ ಹೇಳಿಕೆ ಖಂಡನೀಯ; ಬಸವರಾಜ ಚಿನಗುಡಿ ಅಭಿಮತ

ಸುದ್ದಿ ಸದ್ದು ನ್ಯೂಸ್‌ ಚನ್ನಮ್ಮನ ಕಿತ್ತೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಕುರಿತು ಅವಮಾನಕರ ಹೇಳಿಕೆ ನೀಡಿರುವ ಬೀದರ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಸ್ವಾಮಿ ಅವರಿಗೆ ಅವರಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಕಿತ್ತೂರು ತಹಶೀಲ್ದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಜ ೧೬ ರಂದು ಸಂಜೆ ವಾಣಿ ಪತ್ರಿಕೆಯಲ್ಲಿ “ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ” ಸಂಘಟನೆಯು ನಕಲಿ ಸಂಘಟನೆಯಾಗಿದ್ದು ರಾಜ್ಯದ ಪತ್ರಕರ್ತರನ್ನು ದಾರಿ ತಪ್ಪಿಸುತ್ತಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಅಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಇತ್ತೀಚೆಗೆ ನಡೆದ ಪತ್ರಕರ್ತರ ಚುನಾವಣೆಯಲ್ಲಿ “ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ”ದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿ ಹೀನಾಯವಾಗಿ ಸೋತಿರುವುದರಿಂದ ಹತಾಶೆಗೊಂಡು ಹೀಗೆ ಮಾಡುತ್ತಿದ್ದಾರೆ ಎಂದು ಅವಮಾನಕರ ಹೇಳಿಕೆ ನೀಡಿದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಖಜಾಂಚಿ ಉದಯವಾಣಿ ಕಿತ್ತೂರು ತಾಲೂಕಾ ವರದಿಗಾರ ಬಸವರಾಜ ಚಿನಗುಡಿ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಚುನಾವಣೆ ಸೋಲು ಗೆಲವು ಸರ್ವೇ ಸಾಮಾನ್ಯ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಅಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಅವರು ಅಂತಹ ಅನೇಕ ಚುನಾವಣೆಗಳನ್ನು ಎದುರಿಸಿದ್ದಾರೆ. ಅವರಿಗೆ ಸೋಲು ಗೆಲುವಿನ ಕುರಿತು ಹತಾಶೆ ಭಾವನೆ ಇಲ್ಲ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆಯುವ ಭೇದಭಾವ, ಅಸಮಾನತೆ ಹಾಗೂ ಅಪಾರಧರ್ಶಕತೆಯ ನಡೆಯನ್ನು ಕಂಡು ಅಲ್ಲಿಂದ ಹೊರಗೆ ಬಂದು ರಾಜ್ಯದ ಪರ್ತಕರ್ತರಿಗೆ ಏನಾದರೂ ಮಾಡಬೇಕು ಎಂದು ಪಣತೊಟ್ಟು ಅಧಿಕೃತವಾಗಿ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದುಕೊಂಡು ಕಾನೂನಿನ ಮೂಲಕ ಸ್ಥಾಪಿಸಿದ್ದಾರೆ. ಜೊತೆಗೆ ರಾಜ್ಯದಾದ್ಯಂತ ಎಲ್ಲ ಜಿಲ್ಲಾ ಮತ್ತು ತಾಲೂಕಾ ಕೇಂದ್ರಗಳಲ್ಲಿ ಸಂಘಟನೆಯನ್ನು ಪ್ರಾರಂಭ ಮಾಡಿದ್ದಾರೆ. ಸಂಘವು ಅತೀ ಕಡಿಮೆ ಸಮಯದಲ್ಲಿ ವೇಗವಾಗಿ ಆಗುತ್ತಿರುವ ಬೆಳವಣಿಗೆಯನ್ನು ಸಹಿಸಲಾಗದೆ ಸುಳ್ಳು ಆರೋಪ ಮಾಡುತ್ತಿದ್ದಾರೆ.
ಒಂದು ದೊಡ್ಡ ಜಿಲ್ಲೆಯ ಕಾ.ನಿ.ಪ ಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶಿವಕುಮಾರ್ ಸ್ವಾಮಿ ಅವರು ಅಪ್ರಭುದ್ಧರಂತೆ ಮಾತನಾಡುತ್ತಿರುವ ಅವರ ರೀತಿ ನೋಡಿದರೆ ಅವರಿಗೆ ನಮ್ಮ ಸಂಘದ ಬೆಳವಣಿಗೆಯನ್ನು ನೋಡಿ ಹೊಟ್ಟೆಕಿಚ್ಚು ಆಗಿರಬೇಕು ಅಥವ ಅವರಿಗೆ ಬುದ್ಧಿ ಬ್ರಮಣೆ ಅಗಿರಬೇಕು. ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದುಕೊಂಡು ಮಾತನಾಡುವ ಇವರನ್ನು ಯಾವುದಾದರೂ ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು ಎಂದು ಹೇಳಿದರು. ಈ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಕಿತ್ತೂರು ತಾಲೂಕಾ ಅಧ್ಯಕ್ಷ ರುದ್ರಪ್ಪ ಹುಬ್ಬಳ್ಳಿ. ಉಪಾಧ್ಯಕ್ಷ ಮಹಾಂತೇಶ ಕರಬಸನ್ನವರ, ಕಾರ್ಯಾಧ್ಯಕ್ಷ ಪ್ರವೀಣ ಗಿರಿ, ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಮಣ್ಣವಡ್ಡರ, ಸದಸ್ಯರುಗಳಾದ ವಿಠ್ಠಲ ಮಿರಜಕರ, ಪ್ರಾಣೇಶ ಕೊಡ್ಲಿ ಸೇರಿದಂತೆ ಇತರರು ಇದ್ದರು.

ಜಿಲ್ಲೆ

ರಾಜ್ಯ

error: Content is protected !!