Saturday, July 20, 2024

ಪ್ರೌಢಶಾಲಾ ಶಿಕ್ಷರರ ಅಕ್ರಮ ನೇಮಕಾತಿಗೆ ಬಲಿಯಾದ್ರಾ ಸಂಪಗಾವಿಯ ಮಹಾಂತೇಶ ಬೇಣ್ಣಿ…?

ಲೇಖನ:ಉಮೇಶ ಗೌರಿ (ಯರಡಾಲ)

ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಹಗರಣವನ್ನೇ ಇನ್ನೂ ರಾಜ್ಯದ ಜನತೆಗೆ ಅರಗಿಸಿಕೊಳ್ಳಲಾಗಿಲ್ಲ. ಅದರ ಮಧ್ಯೆ  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲೂ ಹಗರಣ ನಡೆದಿರೋದು ಬೆಳಕಿಗೆ ಬಂದ ಬೆನ್ನಲೆ ಪ್ರೌಢಶಾಲಾ ಶಿಕ್ಷರರ ಅಕ್ರಮ ನೇಮಕಾತಿಗೆ ಬಲಿಯಾದ ವ್ಯಕ್ತಿಯ ರೋಚಕ ಕಥೆ ಇದು.

ಹೌದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಪಗಾವಿ ಗ್ರಾಮದ ಮಹಾಂತೇಶ ರುದ್ರಪ್ಪ ಬೆಣ್ಣಿ  2012-13ರಲ್ಲಿ ಕರ್ನಾಟಕ ಸರಕಾರದ ಪ್ರೌಡಶಾಲಾ ಸಹಶಿಕ್ಷಕರ ನೇಮಕಾತಿಗಾಗಿ ಅರ್ಜಿ ಸಲ್ಲಿಸಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರತಿಶತ 71.2604 ಅಂಕ ಪಡೆದು ಬೆಳಗಾವಿ ವಿಭಾಗಕ್ಕೆ 89ನೆ ರ‍್ಯಾಂಕ್‌ ನಲ್ಲಿ ಮೊದಲನೆ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿಯಮದ ಪ್ರಕಾರ ಎಲ್ಲ ದಾಖಲೆಗಳ ಪರಿಶೀಲನೆಗೆ ಹಾಜರಾಗಿ ಎಲ್ಲ ದಾಖಲಾತಿಗಳು ಸರಿಯಾಗಿ ಇವೆ ಎಂಬ ಸ್ವಿಕೃತಿಯನ್ನು ಪ್ರತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪಡೆದು ಕೊಂಡಿರುತ್ತಾನೆ.

ಇನ್ನೇನು ಪ್ರೌಡಶಾಲಾ ಶಿಕ್ಷಕನಾಗಿ ನೇಮಕವಾದೆ ಅನ್ನುವ ಕನಸು ಕಂಡ ಇತ ಮುಂದೆ ಕೆಎಎಸ್, ಐಎಎಸ್  ಮಾಡಬೇಕೆಂಬ ಆಶೆಯೂ ಇಮ್ಮಡಿಗೊಂಡಿತ್ತು. ಆದರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಭ್ರಷ್ಟ ಅಧಿಕಾರಿಗಳ ಕಾಣದ ಕೈಗಳ ಕೃಪಾ ಕಟಾಕ್ಷದಿಂದ ಕಡಿಮೆ ಅಂಕಗಳನ್ನು ಪಡೆದ ಅಭ್ಯರ್ಥಿಯನ್ನು ನೇಮಕಾತಿ ಮಾಡಿಕೊಳ್ಳುತ್ತಾರೆ.ಕಡಿಮೆ ಅಂಕಗಳನ್ನು ಪಡೆದ ಅಭ್ಯರ್ಥಿಗೆ ಗ್ರೇಸ್ ಮಾರ್ಕ್ಸ ಅಂತ ಕೊಟ್ಟು ಅಂಕಗಳನ್ನು ಜಾಸ್ತಿ ಮಾಡಿ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ.ಅತಿ ಕಡಿಮೆ ಅಂಕ ಪಡೆದ ವ್ಯಕ್ತಿಗೆ ಸರಕಾರದ ಉದ್ಯೋಗ ಸಿಗುವಂತೆ ಮಾಡಿದ ಮಹಾನ್ ಭ್ರಷ್ಟ ಅಧಿಕಾರಿಗಳು ಸಾರ್ವಜನಿಕ ಇಲಾಖೆಯಲ್ಲಿ ಇದ್ದಾರೆ ಎಂದರೆ ಅದು ಶಿಕ್ಷಣ ಇಲಾಖೆಗೆ ನಾಚಿಕೆಯಾಗುವಂತ ಕೆಲಸ ಅಲ್ಲವೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿಯಮದ ಪ್ರಕಾರ ದಾಖಲೆಗಳ ಪರಿಶೀಲನೆ ಮಾಡಿದ ನಂತರ ಯಾವುದೇ ರೀತಿಯ  (ಗ್ರೇಸ್ ಮಾರ್ಕ್ಸ ಅಂತ) ಅಂಕಗಳನ್ನು ಬದಲಾವಣೆ ಮಾಡುವ ಅಧಿಕಾರ ಯಾವುದೇ ಅಧಿಕಾರಿಗಳಿಗೂ ಇರುವುದಿಲ್ಲ. ಆದರೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಆಯ್ಕೆ ಪ್ರಕ್ರೀಯೆ ಮಾಡಿರುವುದು ವಿಪರ್ಯಾಸ.

ಎಷ್ಟೋ ಬಡ ವಿದ್ಯಾರ್ಥಿಗಳು ಇಲಾಖೆಯವರು ನಡೆಸುವ ಪರೀಕ್ಷೆಗಳಿಗೆ ಹಾಜರಾಗಲು ದಿನರಾತ್ರಿ ಎನ್ನದೆ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಏನೇನೊ ಕನಸುಗಳನ್ನ ಕಂಡಿರುತ್ತಾರೆ .ಅಂತಹುದುರಲ್ಲಿ ಪರೀಕ್ಷೆಗಳು ಪಾರದರ್ಶಕವಾಗಿರದೆ ಅಕ್ರಮದಿಂದ ಕೂಡಿವೆ ಎಂದರೆ ವಿದ್ಯಾರ್ಥಿಗಳ ಮಾನಸಿಕ ನೋವು ಜೊತೆಗೆ ವ್ಯವಸ್ಥೆ ಬಗ್ಗೆ ಸಂಶಯ ಹುಟ್ಟದೆ ಇರಲು ಸಾದ್ಯವಿಲ್ಲ.

2012-13 ಪ್ರೌಡಶಾಲಾ ಸಹಶಿಕ್ಷಕರ ನೇಮಕಾತಿಯಲ್ಲಿ ನಡೆದ ಅಕ್ರಮದ ಬಗ್ಗೆ ತನಿಖೆ ಮಾಡಿ, ಅನ್ಯಾಯವನ್ನ ಸರಿಪಡಿಸಿ, ಪ್ರತಿಭಾವಂತ ಅಭ್ಯರ್ಥಿ ಮಹಾಂತೇಶ ಬೆಣ್ಣಿಗೆ ಸರಕಾರ ನ್ಯಾಯ ದೊರಕಿಸಿ ಕೊಡುತ್ತದೆಯೇ ಎಂದು ಕಾದುನೋಡಬೇಕಾಗಿದೆ.

ನನಗೆ ಸಿಗಬೇಕಾದ ಸರ್ಕಾರಿ ನೌಕರರಿಂದ ನನ್ನನ್ನು ವಂಚಿಸಿದ್ದಾರೆ. ನನಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸರ್ಕಾರದಿಂದ ಸರಿಯಾದ ನ್ಯಾಯ ಒದಗಿಸಲಿಲ್ಲ ಅಂದರೆ ನಾನು ಲೋಕಾಯುಕ್ತ, ಹೈಕೋರ್ಟ್, ಸುಪ್ರೀಂಕೋರ್ಟ್ ವರೆಗೂ ಹೋಗಲು ಸಿದ್ಧ. ಎಷ್ಟೇ ಪ್ರಭಾವಶಾಲಿ ವ್ಯಕ್ತಿಗಳಾದರೂ ಅವರನ್ನು ಜೈಲಿಗೆ ಅಟ್ಟದೆ ಬಿಡುವುದಿಲ್ಲ ಇದು ನನ್ನ ದೃಢ ನಿರ್ಧಾರ.ಎತಂಹ ಕಾನೂನು ಹೋರಾಟಕ್ಕೂ ನಾನು ಸದಾ ಸಿದ್ಧ.                                                                                                                        ಮಹಾಂತೇಶ ಬೇಣ್ಣಿ.

 

ಜಿಲ್ಲೆ

ರಾಜ್ಯ

error: Content is protected !!