Wednesday, September 18, 2024

ಗಣಪತಿ ವಿಸರ್ಜನೆ ವೇಳೆ ಯುವಕನ ಬರ್ಬರ ಹತ್ಯೆ:ನಾಲ್ವರ ಬಂಧನ

ಬ‌ೈಲಹೊಂಗಲ: ಸಮೀಪದ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಗಣಪತಿ ವಿಸರ್ಜನೆ ವೇಳೆ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಯರಗಟ್ಟಿ ತಾಲೂಕಿನ ಮುಗಿಹಾಳ ಗ್ರಾಮದಲ್ಲಿ ಗಣೇಶ ವಿಸರ್ಜನೆ ಮಾಡುವ ವೇಳೆ ಎಲ್ಲವೂ ಸುಗಮವಾಗಿ ನಡೆಯುತ್ತಿದೆ ಅನ್ನುವಷ್ಟರಲ್ಲಿ, ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಜಗಳ ಆರಂಭವಾಗಿದೆ. ಈ ಜಗಳ, ಗಲಾಟೆಯಾಗಿ ತಿರುಗಿ ಕೊನೆಗೆ ವಿದ್ಯಾರ್ಥಿ ಅರ್ಜುನ ಪಾಟೀಲ ಎಂಬವನ ಕೊಲೆಯಾಗಿದೆ.

ಗಲಾಟೆಯಲ್ಲಿ 21 ವರ್ಷದ ಮುಗಳಿಹಾಳ ಗ್ರಾಮದ ಅರ್ಜುನಗೌಡ ಪಾಟೀಲ ಎಂಬ ಯುವಕನಿಗೆ ಚೂರಿ ಹಾಕಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ತೀವ್ರವಾಗಿ ರಕ್ತಸ್ರಾವದಿಂದ ಬಳಲುತ್ತಿದ್ದ ಅರ್ಜುನನ್ನು ಜಿಲ್ಲಾಸ್ಪತ್ರೆಗೆ ತಂದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯ ಭಂದ್ರೊಳಿ ( 21) , ಸುಭಾಸ ಸೊಲನ್ನವರ್ ( 21) , ವಿಠ್ಠಲ ಮೀಶಿ ( 20) ಹಾಗೂ ಇನ್ನೋರ್ವ ಬಾಲಾಪರಾಧಿ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಹಳೆ ವೈಷಮ್ಯ ಕಾರಣ ಎನ್ನಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ. ಮುರಗೋಡ ಠಾಣೆಯಲ್ಲಿ ದೂರು ದಾಖಲಾಗಿದೆ.

ಈಗಾಗಲೇ ಪೊಲೀಸರು ಬಂಧನದಲ್ಲಿರುವ ಆರೋಪಿಗಳ ವಿಚಾರಣೆ ನಡೆಸಿದ್ದು, ಗಲಾಟೆ ಮತ್ತು ಕೊಲೆಯ ಮೂಲ ಕಾರಣವನ್ನು ಪತ್ತೆ ಹಚ್ಚಲು ಪ್ರಾಥಮಿಕ ತನಿಖೆ ಮಾಡುತ್ತಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!