Saturday, July 20, 2024

‘ದೆಹಲಿಯಿಂದ ಬಂದ ಕೆಲವು ನಾಯಕರು ನಿಮ್ನ ಸಿಎಂ ಮಾಡ್ತೀವಿ 2500 ಕೋಟಿ ಕೊಡಿ ಅಂತ ಹೇಳಿದ್ದರು; ಬಸನಗೌಡ ಪಾಟೀಲ ಯತ್ನಾಳ

ಬೆಳಗಾವಿ: ‘ದೆಹಲಿಯಿಂದ ಬಂದ ಕೆಲವು ನಾಯಕರು ಬಸನಗೌಡರೆ ನಿಮ್ನ ಸಿಎಂ ಮಾಡ್ತೀವಿ 2500 ಕೋಟಿ ಕೊಡಿ ಅಂತ ಹೇಳಿದ್ದರು; ಎಂದು ವಿಜಯಪೂರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ರಾಮದುರ್ಗ ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾರೂ ಮೋಸ ಹೋಗಬೇಡಿ. ದೆಹಲಿಗೆ ಹೋಗಿ ಸೋನಿಯಾ ಗಾಂಧಿ , ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಿಸ್ತೀವಿ ಅಂತ ಹೇಳುತ್ತಾರೆ. ನನ್ನ ಬಳಿಯೂ ಒಂದಷ್ಟು ಮಂದಿ ಬಂದಿದ್ದರು. ನಿಮ್ಮನ್ನು ಮುಖ್ಯಮಂತ್ರಿ ಮಾಡಸ್ತೇವೆ 2500 ಕೋಟಿ ರೆಡಿ ಮಾಡಿ ಇಟ್ಟುಕೊಳ್ಳಿಇ ಅಂತ ಹೇಳಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.
2500 ಕೋಟಿ ಅಂದ್ರೆ ಏನು ಅಂತ ಗೊತ್ತಾ ? ಅದನ್ನು ಕೋಣೆಯಲ್ಲಿ ಇಡೋದಾ ಇಲ್ಲ ಗೋದಾಮಿನಲ್ಲಿ ಇಡೋದಾ ಅಂತ ನಾನು ಅವರನ್ನು ಪ್ರಶ್ನೆ ಮಾಡಿದೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲ ಸಾಮಾಜಿಕ ಕಾರ್ಯಕರ್ತರು ಹುಟ್ಟಿಕೊಳ್ಳುತ್ತಾರೆ. ನೋಟ್ ಬುಕ್ ವಿತರಣೆ, ಸಾಮೂಹಿಕ ವಿವಾಹ , ತಾಳಿ ಭಾಗ್ಯ ಎಲ್ಲ ಕೊಡುತ್ತಾರೆ. ಎಲ್ಲ ಭಾಗ್ಯವನ್ನು ತೆಗೆದುಕೊಳ್ಳಿ ವೋಟ್ ಹಾಕುವಾಗ ಯೋಚಿಸಿ ಯೋಜಿಸಿ ಒಳ್ಳೆಯ ಭಾಗ್ಯ ಇರುವ ಅಭ್ಯರ್ಥಿಗೆ ಹಾಕಿ ಎಂದು ಕಿವಿಮಾತು ಹೇಳಿದರು.

ಜಿಲ್ಲೆ

ರಾಜ್ಯ

error: Content is protected !!