Wednesday, September 18, 2024

ಭವ್ಯ ಮೆರವಣಿಗೆಯೊಂದಿಗೆ ಜಿಲ್ಲಾಧಿಕಾರಿ ನಿತೀಶ್ ಪಾಟೀಲರನ್ನು ಬರಮಾಡಿಕೊಂಡ ಮುಕ್ಕಲ ಗ್ರಾಮಸ್ಥರು.

ಧಾರವಾಡ: ಜಿಲ್ಲೆ ಕಲಘಟಗಿ ತಾಲೂಕಿನ ಮುಕ್ಕಲ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳನ್ನು ಭವ್ಯ ಮೆರವಣಿಗೆಯೊಂದಿಗೆ ಗ್ರಾಮಕ್ಕೆ ಬರಮಾಡಿಕೊಳ್ಳಲಾಯಿತು.

ನಂತರ ಗ್ರಾಮದ ಪ್ರಮುಖ ಬೀದಿಯಲ್ಲಿ ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ನಂತರ ಗ್ರಾಮದ ಶಾಲೆಯಲ್ಲಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳನ್ನು ಕರೆಯಲಾಯಿತು.

 ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ನಿತೀಶ್ ಪಾಟೀಲ್ ಅವರು ಮಾತನಾಡಿ ಗ್ರಾಮದ ಯಾವುದೇ ಕೆಲಸಗಳು ಇದ್ದರು ನನ್ನ ಗಮನಕ್ಕೆ ತರಬೇಕೆಂದು ಗ್ರಾಮಸ್ಥರಿಗೆ ತಿಳಿಸಿದರು ಹಾಗೂ ನಿಮ್ಮ ಯಾವುದೇ ಕೆಲಸಗಳು ಇದ್ದರೆ ಮನವಿ ನೀಡಿ ಈ ಕೂಡಲೇ ಕೆಲಸಗಳನ್ನು ನಿಮ್ಮ ಗ್ರಾಮದಲ್ಲಿ ಬಗೆಹರಿಸುವುದಾಗಿ ತಿಳಿಸಿದರು.

ಹಾಗೂ ಈ ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಿಂಗಾರೆಡ್ಡಿ ನಡುವಿನಮನಿಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಸ್ಆರ್ ಪಾಟೀಲ್ ತಾಲೂಕಾ ದಂಡಾಧಿಕಾರಿಗಳಾದ ಎಲ್ಲಪ್ಪ ಗೋಣೆಣವರ ಹಾಗೂ ತಾಲೂಕ ಆರಕ್ಷಕ ನಿರೀಕ್ಷಕರಾದ ಪ್ರಭು ಸೂರಿನ ಅರಣ್ಯ ಇಲಾಖೆ ಅಧಿಕಾರಿಗಳಾದ ಶ್ರೀಕಾಂತ್ ಪಾಟೀಲ್ ಹಾಗೂ ಎಲ್ಲಾ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಉಪಾಧ್ಯಕ್ಷರು ಹಾಗೂ ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ: ಶಶಿಕುಮಾರ್ ಕಟ್ಟಿಮನಿ

ಜಿಲ್ಲೆ

ರಾಜ್ಯ

error: Content is protected !!