Wednesday, September 18, 2024

ಯರಗಟ್ಟಿಯಲ್ಲಿ 9 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

ಯರಗಟ್ಟಿ : ಪಟ್ಟಣದ ಕುಮಾನಮಡ್ಡಿಯಲ್ಲ 9 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿದೆ.

ಕಿರಣ ಭೀಮಶೆಪ್ಪ ಭಜಂತ್ರಿ ಎಂಬಾತನು ಅಪ್ರಾಪ್ತ ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ಈ ಪ್ರಕರಣ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಿರಣ ಭೀಮಶೆಪ್ಪ ಭಜಂತ್ರಿ ಎಂಬಾತನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆ ದಾಖಲಿಸಲಾಗಿದೆ ಎಂದು ಪಿಎಸ್ಐ ಪ್ರವೀಣ ಗಂಗೋಳ್ಳಿ ತಿಳಿಸಿದ್ದಾರೆ.

(ವರದಿ: ಈರಣ್ಣಾ ಹುಲ್ಲೂರ)

ಜಿಲ್ಲೆ

ರಾಜ್ಯ

error: Content is protected !!