Wednesday, September 18, 2024

ಗರುಡ ಯುಟ್ಯೂಬ್ ಚಾನಲ್ ಪತ್ರಕರ್ತ ಕೃಷ್ಣಮೂರ್ತಿ ಅರೆಸ್ಟ್.

ಧಾರವಾಡ: ನೊಂದ ಮಹಿಳೆಗೆ ನ್ಯಾಯ ಕೊಡಿಸುವುದಾಗಿ ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗರುಡ ಎಂಬ ಹೆಸರಿನ ಯುಟ್ಯೂಬ್ ಚಾನೆಲ್ ಪತ್ರಕರ್ತ ಕೃಷ್ಣಮೂರ್ತಿ ಕುಲಕರ್ಣಿ ಎಂಬ ವ್ಯಕ್ತಿಯನ್ನು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಧಾರವಾಡ ತಾಲೂಕಿನ ಸೋಮಾಪೂರ ಗ್ರಾಮದ ಮಹಿಳೆ ಮೇಲೆ ಕೃಷ್ಣಮೂರ್ತಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ, ಎಂಬ ಆರೋಪ ಕೇಳಿ ಬಂದಿದೆ. ಸ್ವತಃ ದೌರ್ಜನ್ಯಕ್ಕೊಳಗಾದ ಮಹಿಳೆಯೇ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ತನ್ನ ಗಂಡನ ಕಿರುಕುಳದಿಂದ ಬೇಸತ್ತು ಪೊಲೀಸ್ ಠಾಣೆಗೆ ಬಂದಿದ್ದ ಆ ಮಹಿಳೆಯು ತನಗೆ ನ್ಯಾಯ ಕೊಡಿಸುವಂತೆ ಗರುಡ ಯುಟ್ಯೂಬ್ ಚಾನೆಲ್‌ಗೂ ಮೊರೆ ಹೋಗಿದ್ದಳು.

ಕೃಷ್ಣಮೂರ್ತಿ

ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡ ಕೃಷ್ಣಮೂರ್ತಿ ತನ್ನ ಕೃಷ್ಣ ಲೀಲೆ ತೋರಿಸಿದ್ದಾನೆ. ಮೂರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ ಕೃಷ್ಣಮೂರ್ತಿ ಮಹಾಶಯ. ಆಕೆಯ ವಡವೆಯನ್ನೂ ಒತ್ತೆ ಇಟ್ಟು ಹಣ ಕೂಡ ಪಡೆದುಕೊಂಡಿದ್ದಾನಂತೆ. ಅಲ್ಲದೆ ಆ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.

ವರದಿ: ನಿತೀಶ್ ಪಾಟೀಲ. ತಡಸ

ಜಿಲ್ಲೆ

ರಾಜ್ಯ

error: Content is protected !!