Tuesday, September 17, 2024

ಸಂವಿಧಾನ ಶಿಲ್ಪಿಗೆ ಅವಮಾನಿಸಿದ ಜಡ್ಜ್.

ಸುದ್ದಿ ಸದ್ದು ನ್ಯೂಸ್

ಅಂಬೇಡ್ಕರ್ ಫೋಟೋ ತೆಗದರೇ ಮಾತ್ರವೇ ನಾನು ಕಾಯ೯ಕ್ರಮಕ್ಕೆ ಬರುತ್ತೇನೆ ಎಂದು ಹೇಳಿದ ಜಿಲ್ಲಾ ನ್ಯಾಯಾಧೀಶರು.. ಹೇಳಿ ತೆಗೆದ ನಂತರ ಬಂದು ಗಾಂಧೀಜಿ ಪೋಟಕ್ಕೆ ಪುಷ್ಪಾಪ೯ಣೆ ಮಾಡಿದ್ದಾರೆ ಎಂದು ವರದಿಯಾಗಿದೆ.ನ್ಯಾಯಾಧೀಶರು ಈ ನಡೆ ಖಂಡನಿಯ.

ಕರ್ನಾಟಕ ಸರ್ಕಾರವು ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪೋಟೋ ಇಡಲು ತಿಳಿಸಿ ಆದೇಶ ಹೊರಡಿಸಿದೆ.ಇಂದು ಜರುಗಿದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೊದಲು ರಾಯಚೂರು ಜಿಲ್ಲಾ ವಕೀಲರ ಸಂಘದ ಕಾರ್ಯಕ್ರಮದಲ್ಲಿ ಮಾಹತ್ಮಾ ಗಾಂಧಿಯವರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪೋಟೊ ಇಟ್ಟು ಆಚರಣೆ ಮಾಡಲಾಗಿದೆ.

ನಂತರ ರಾಯಚೂರು ನ್ಯಾಯಾಂಗ ಇಲಾಖೆಯು ವತಿಯಿಂದ ನ್ಯಾಯಾಲಯದ ಆವರಣದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಹತ್ಮಾ ಗಾಂಧಿ ಪೋಟೊ ಜೊತೆಗೆ ಡಾ. ಬಿ. ಆರ್. ಅಂಬೇಡ್ಕರ್ ಪೋಟೊ ಇಡಲಾಗಿದೆ. ಈ ಕುರಿತು ವಿಷಯ ತಿಳಿದ ಮಾನ್ಯ ಜಿಲ್ಲಾ ನ್ಯಾಯಾಧೀಶರು ಮಾನ್ಯ ಹೈಕೋರ್ಟ್ ನಿಂದ ನಮಗೆ ಯಾವದೇ ನಿರ್ದೇಶನ ಬಂದಿಲ್ಲ. ಆದ್ದರಿಂದ ಅಂಬೇಡ್ಕರ್ ಪೋಟೊವನ್ಜು ತೆಗೆಯುವಂತೆ ಮೌಖಿಕವಾಗಿ ಸೂಚಿಸಿದಾಗ ಅನಿವಾರ್ಯವಾಗಿ ವಕೀಲರೊಬ್ಬರು ಅಂಬೇಡ್ಕರ್ ಪೋಟೊ ವನ್ನು ತೆಗೆದುಕೊಂಡು ಹೋಗಿ ವಕೀಲರ ಸಂಘದಲ್ಲಿ ಅಂಬೇಡ್ಕರ್ ಪೋಟೊ ಇಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ನೆರೆದ ಕೆಲವು ವಕೀಲರು ಹಾಗು ಜನ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿರುವದು ವಿಡಿಯೋದಲ್ಲಿ ಕಂಡು ಬರುತ್ತದೆ.

ಇದಿಷ್ಟು ನಡೆದ ಘಟನೆ.

ಗಣರಾಜ್ಯೋತ್ಸವ ದಿನದಂದು ಮಾಹತ್ಮ ಗಾಂಧಿಯವರ ಪೋಟೊ ಜೊತೆಗೆ ಡಾ. ಅಂಬೇಡ್ಕರ್ ಪೋಟೊ ಇಡುವದೇ ತಪ್ಪೇ ? ಕಾನೂನಿನ ಬಲ್ಲ ನ್ಯಾಯಾಧೀಶರೇ ಈ ರೀತಿಯ. ನಡೆದುಕೊಂಡರೆ ಹೇಗೆ ? ನ್ಯಾಯಾಧೀಶರ ಈ ನಡೆ ಜನರಲ್ಲಿ ತಪ್ಪು ಸಂದೇಶ ಉಂಟು ಮಾಡುತ್ತದೆ.ಈ ಕುರಿತು ಮಾನ್ಯ ನ್ಯಾಯಾಧೀಶರು ಕ್ಷಮೆ ಕೊರಬೇಕು ಮಾನ್ಯ ಕರ್ನಾಟಕ ಹೈಕೋರ್ಟ್ನ‌‌ವರು ಈ ನ್ಯಾಯಾಧೀಶರ ವಿರುದ್ದು ಸೂಕ್ತ ಕ್ರಮ ಕೈಗೊಳ್ಳಬೇಕು

ಅಂಬೇಡ್ಕರ್ ಪೋಟೊ ತೆಗೆದರೆ ಮಾತ್ರ ನಾನು ದ್ವಜಾರೊಹರಣ ಮಾಡಲು ಬರುತ್ತೆನೆ ಎಂದು ಹೇಳಿ ಅಂಬೇಡ್ಕರ್ ಪೋಟೊ ತೆಗೆಸಿದ ನ್ಯಾಯಾಧೀಶರ ನಡೆ ಖಂಡನಿಯ.

ಕೆ.ಎಚ್.ಪಾಟೀಲ ವಕೀಲರು ರಾಜ್ಯ ಜಂಟಿ ಕಾರ್ಯದರ್ಶಿ ಅಖಿಲ ಭಾರತ ವಕೀಲರ ಒಕ್ಕೂಟ AILU ಕರ್ನಾಟಕ

ಜಿಲ್ಲೆ

ರಾಜ್ಯ

error: Content is protected !!