Thursday, September 12, 2024

ಬೆಳಗಾವಿ ಜಿಲ್ಲಾ ಕಸಾಪ ದಿಂದ ನೇತಾಜಿ ಅವರ ಜನ್ಮದಿನದ ಪ್ರಯುಕ್ತ ಜ.25 ರಂದು ವೆಬಿನಾರ್. ವಿಶೇಷ ಉಪನ್ಯಾಸ ಆಯೋಜನೆ

ಬೆಳಗಾವಿ 23: ನೇತಾಜಿ ಸುಭಾಸ ಚಂದ್ರ ಭೋಸ್ ರವರ 125 ನೇ ಜನ್ಮದಿನೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಘಟಕದಿಂದ ಮಂಗಳವಾರ ಜ 25 ರಂದು ಸಂಜೆ 5 ಗಂಟೆಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಗೂಗಲ್ ಮೀಟ್ ವೆಬಿನಾರ್ ಮೂಲಕ ಆಯೋಜಿಸಲಾಗಿದೆ. ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ -ನೇತಾಜಿ ಸುಭಾಸ ಚಂದ್ರ ಭೋಸ್” ಎಂಬ ವಿಷಯದ ಮೇಲೆ ಹಿರಿಯ ಸಾಹಿತಿ ಪಾಂಡುರಂಗ ಯಲಿಗಾರ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಸಾಪ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಂಯೋಜಕ ಪಾಂಡುರಂಗ ಜಟಗನ್ನವರ ಮಾದ್ಯಮಕ್ಕೆ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಬೆಳಗಾವಿಯ ಆಕಾಶ್ ಅರವಿಂದ ಥಬಾಜ ಅವರನ್ನು (ಮೊಬೈಲ್ ಸಂಖ್ಯೆ 9448634208/9035419700) ಸಂಪರ್ಕಿಸಿಲು ಕೋರಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!