Saturday, July 20, 2024

ಹಡಪದ ಸಮಾಜದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸುವರ್ಣ ಸೌಧದ ಮುಂದೆ ಪ್ರತಿಭಟನೆ

ಬೆಳಗಾವಿ: ರಾಜ್ಯ ಹಡಪದ ಅಪ್ಪಣ್ಣ ಸಮಾಜ ಬಾಂಧವರು ಸುಕ್ಷೇತ್ರ ತಂಗಡಗಿಯ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸೋಮವಾರ ಡಿ.20 ರಂದು ಬೆಳಗಾವಿ ಸುವರ್ಣ ಸೌಧದ ಮುಂದೆ ಹಲವಾರು ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

“ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ” ಈ ವಾಕ್ಯವು ಬರಿ ಮಾತಿಗಷ್ಟೇ ಉಳಿದಂತಾಗಿದೆ ಮೂಲ ಕರ್ನಾಟಕದ ನಿವಾಸಿಗಳಾದ ಹಡಪದ ಸಮಾಜದ ನೋವು ಯಾವೊಬ್ಬ ನಾಯಕರಿಗೆ ತಿಳಿಯದೆ ಇರುವುದು ವಿಷಾದನೀಯ ಸಂಗತಿ,

12ನೇ ಶತಮಾನದಲ್ಲಿ ವಿಶ್ವ ಗುರು ಬಸವಣ್ಣನವರಿಂದ ಸ್ಥಾಪಿತವಾದ ಮೊದಲ ಸಂಸತ್ತು ಅನುಭವ ಮಂಟಪದಲ್ಲಿ ಬಸವಣ್ಣನವರ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ ಹಡಪದ ಅಪ್ಪಣ್ಣನವರ ಕಾರ್ಯ ಈ ನಾಡಿಗೆ ಅನನ್ಯ, ಅಂತಹ ಸಮಾಜಕ್ಕೆ ಇಂದು ಯಾವೊಂದು ಸರ್ಕಾರವು ಗಮನಹರಿಸದಿರುವುದು ಸಮಸ್ತ ಸಮಾಜಕ್ಕೆ ನೋವುಂಟು ಮಾಡಿದೆ.

ಅನ್ಯ ರಾಜ್ಯದಿಂದ ವಲಸೆ ಬಂದು ಕ್ಷೌರಿಕ ಉದ್ಯೋಗ ಮಾಡುವಂತಹ ಸಮಾಜಕ್ಕೆ ಇಂದು ಪ್ರತ್ಯೇಕ ನಿಗಮ ಘೋಷಿಸಿದ್ದಾರೆ ಆದರೆ ಮೂಲನಿವಾಸಿಗಳು ಕರ್ನಾಟಕದ ನೆಲ ,ಜಲ ,ಭಾಷೆ ಒಳಗೂಡಿಸಿಕೊಂಡು ಕರ್ನಾಟಕದಲ್ಲಿ ವಾಸಿಸುತ್ತಿರುವ ಹಡಪದ ಸಮಾಜಕ್ಕೆ ಇದುವರೆಗೆ ನ್ಯಾಯ ಸಿಕ್ಕಿಲ್ಲ.

ಅಧಿಕಾರಕ್ಕೆ ಬಂದರೆ ನಿಗಮ ಮಾಡಿಕೊಡುತ್ತೇವೆ ಎಂದು ಬರೀ ಬಾಯಿ ಮಾತಿನಲ್ಲಿ ಹೇಳುವ ನಾಯಕರ ಆಶ್ವಾಸನೆ ಬಿಟ್ಟರೆ ನಮ್ಮ ಸಮಾಜಕ್ಕೆ ಇದುವರೆಗೆ ಯಾವುದೇ ಹೇಳಿಕೊಳ್ಳುವಂತಹ ಸೌಲಭ್ಯಗಳು ಸಿಕ್ಕಿಲ್ಲ ದಲಿತರಿಗಿಂತಲೂ ಹೀನಾಯವಾಗಿ ಬದುಕು ನಡೆಸುತ್ತಿರುವ ಸಮುದಾಯದ ಬೆನ್ನಿಗೆ ನಿಲ್ಲಲು ಯಾವೊಬ್ಬ ಪ್ರಬಲ ನಾಯಕರು ಇಲ್ಲ.

ರಾಜ್ಯದ ವಿವಿಧ ಜಿಲ್ಲೆಗಳ ನಿರಂತರ ಹೋರಾಟವು ಸರಕಾರಕ್ಕೆ ಕಾಣುತ್ತಿಲ್ಲ ನಮ್ಮನ್ನು ಕೇಳುವವರು ಯಾರು ಇಲ್ಲ ಎನ್ನುವ ಮನಸ್ಥಿತಿ ಸಮುದಾಯದ ಪ್ರತಿಯೊಬ್ಬರಲ್ಲೂ ಎದ್ದು ಕಾಣುತ್ತಿದೆ ಬರೀ ಪೊಳ್ಳು ಭರವಸೆಗಳೊಂದಿಗೆ ಆಗೊಮ್ಮೆ ಈಗೊಮ್ಮೆ ನಾಯಕರು ಬರಿ ಮನವಿ ಸ್ವೀಕರಿಸಲು ಆಗಮಿಸುತ್ತಿದ್ದಾರೆ ಹೊರತು ಸಮಾಜಕ್ಕೆ ಯಾವುದೇ ಸಹಾಯ-ಸಹಕಾರ ವಾಗಲಿ ಇದುವರೆಗೆ ಸಿಕ್ಕಿಲ್ಲ.

ಆನಂದ ಹಂಪಣ್ಣವರ

ಕರೋನಾ ಮಹಾಮಾರಿ ಸಂದರ್ಭದಲ್ಲಿ ಒಂದು ಭಾರಿ ಪರಿಹಾರವಾಗಿ ರೂ.5000 (ಇದು ಕೆಲವೊಬ್ಬರಿಗೆ ಇನ್ನೂ ಮುಟ್ಟಿಲ್ಲ) ಹೊರತುಪಡಿಸಿ ಸಮುದಾಯಕ್ಕೆ ಯಾವುದೇ ವಿಶೇಷ ಪ್ಯಾಕೇಜ್ ಘೋಷಣೆಯಾಗಿಲ್ಲ ಹಾಗಾಗಿ ನಾವು ಮೂಲ ಕನ್ನಡಿಗರು ನಮ್ಮ ಸಮಾಜ ರಾಜಕೀಯವಾಗಿ ಆರ್ಥಿಕವಾಗಿ ಸಾಕಷ್ಟು ಹಿಂದಿದೆ.

ಈ ನಾಡಿಗೆ ನಮ್ಮ ಪೂರ್ವಜರ ಕೊಡುಗೆ ಸಾಕಷ್ಟಿದೆ ವಚನ ಸಾಹಿತ್ಯಕ್ಕೂ ವಿಶೇಷ ಕೊಡುಗೆ ನೀಡಿದ್ದಾರೆ ಆದರೂ ಇದುವರೆಗೆ ನಮಗೆ ನ್ಯಾಯ ಸಿಕ್ಕಿಲ್ಲ ಹಾಗಾಗಿ ನಮ್ಮ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಬೃಹತ್ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದೇವೆ.

ಈ ಒಂದು ಬೃಹತ್ ಪ್ರತಿಭಟನೆಯಲ್ಲಿ ಬೆಳಗಾವಿ ಜಿಲ್ಲೆಯ ಸಮಾಜದ ಸಮಸ್ತ ಬಾಂಧವರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಹಡಪದ ಸಮಾಜದ ಜಿಲ್ಲಾ ಮಾಧ್ಯಮ ವಕ್ತಾರ ಆನಂದ ಹಂಪಣ್ಣವರ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!