Wednesday, September 18, 2024

ಆಟೋ ರಾಜ ಅವರಿಂದ ಸಮಾಜ ಸೇವೆಕರಿಗೆ ‘ಕಿಂಗ್ ಆಫ್ ಸ್ಟ್ರೀಟ್’ ಪ್ರಶಸ್ತಿ

ಸುದ್ದಿ ಸದ್ದು ನ್ಯೂಸ್ 

ಬೆಂಗಳೂರು: ಹೆಬ್ಬಾಳದ ನಾಗವಾರದಲ್ಲಿ ಇರುವ ಮ್ಯಾರಿಯೇಟ್ ಹೋಟೆಲ್‌ನಲ್ಲಿ ಆಟೋ ರಾಜ ಸ್ಥಾಪಿತ “ನ್ಯೂ ಆರ್ಕ್ ಮಿಷನ್ ಆಫ್ ಇಂಡಿಯಾ ಹೋಮ್ ಆಫ್ ಹೋಪ್” ವತಿಯಿಂದ ಸಮಾಜ ಸೇವೆಯಲ್ಲಿ ಅಪಾರ ಸಾಧನೆಗೈದ ಮಹನೀಯರಿಗೆ ‘ಕಿಂಗ್ ಆಫ್ ಸ್ಟ್ರೀಟ್’ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು. 

ಪ್ರಶಸ್ತಿ ಪ್ರದಾನದ ಜೊತೆಗೆ ಸನ್ಮಾನ ಮಾಡುತ್ತಿರುವ ಗಣ್ಯರು

ಈ ವೇಳೆ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ ಸಣ್ಣ ಕುಟುಂಬವನ್ನು ನಿರ್ವಹಿಸಲಾಗದೆ ಪರದಾಡುವ ಇಂದಿನ ದಿನಮಾನಗಳಲ್ಲಿ ಇಲ್ಲೊಬ್ಬ ಸಾಮಾನ್ಯರಲ್ಲಿ ಅಸಾಮಾನ್ಯ ಈ ಆಟೋ ರಾಜ. ಹೋಮ್ ಆಫ್ ಹೋಪ್ ಮೂಲಕ ಸಾವಿರಾರು ಜನತೆಗೆ ಬೆಳಕಾಗಿದ್ದಾರೆ. ಅನೇಕ ವರ್ಷಗಳಿಂದ ಅನಾಥರ ಬಾಳಿಗೆ ನೆರಳಾಗಿ ನಿಂತಿದ್ದಾರೆ. ಇಲ್ಲಿ ಭಿಕ್ಷುಕರು, ಅನಾಥರು ಬುದ್ಧಿಮಾಂದ್ಯರು, ವಿವಿಧ ಬಗೆಯ ರೋಗಗಳಿಂದ ಬಳಲುತ್ತಿರುವ ರೋಗಿಗಳು ಬದುಕುವ ಭರವಸೆ ಹೊರಟು ಜೀವನವೇ ಬೇಡ ಎಂದವರಿಗೆ ಅಟೋ ರಾಜ ಅವರು ಸ್ಥಾಪಿಸಿದ ಹೋಮ್ ಆಫ್ ಹೋಪ್ ಆಶ್ರಮದಲ್ಲಿ ಆಶ್ರಯ ನೀಡಿ ಸಲಹುತ್ತಿದ್ದಾರೆ. ಕೇವಲ ಆಶ್ರಯ ನೀಡುವುದಲ್ಲದೆ ಇಲ್ಲಿ ವಾಸ ಇರುವ ಹಲವರಿಗೆ ಮದುವೆ ಮಾಡಿ ಅಲ್ಲಿಯೇ ಕೆಲಸ ಕೂಡಾ ಕೊಟ್ಟು ಸಲಹುತ್ತಿದ್ದಾರೆ. ಆಟೋ ರಾಜರ ಇಂತಹ ಸಮಾಜ ಕಾರ್ಯ ಶ್ಲಾಘನೀಯ. ಇಂತಹ ಪುಣ್ಯದ ಕೆಲಸಕ್ಕೆ ನನ್ನ ಕೈಲಾದ ಸಹಾಯವನ್ನು ನಾನು ಮಾಡುತ್ತೇನೆ ಸಮಾಜ ಸೇವಕ, ಮಹದೇವಪುರದ ಹೆಮ್ಮೆ ಆಟೋರಾಜ ಅವರ ಹೋಮ್ ಆಫ್ ಹೋಪ್ ಆಶ್ರಮದಲ್ಲಿ ಪ್ರತಿ ವರ್ಷ ನನ್ನ ಹುಟ್ಟುಹಬ್ಬವನ್ನು ಆಚರಿಸಿ, ಕೈಯಲ್ಲಾದ ಸಹಾಯವನ್ನು ಮಾಡುತ್ತಿರುತ್ತೇನೆ. ಕೋವಿಡ್ ಒಂದನೇ, ಎರಡನೇ ಅಲೆ ಸಂದರ್ಭದಲ್ಲೂ ನಾನ ಅವರ ಜೊತೆ ನಿಂತಿದ್ದೇನೆ ಎಂದ ಅವರು ಇವರ ಈ ಸಮಾಜ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸಿದರು

ಈ ವೇಳೆ ಅಟೋ ರಾಜ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಟೋ ರಾಜ ಅವರನ್ನು ಸನ್ಮಾನಿಸುತ್ತಿರುವುದು

ಈ ಸಂದರ್ಭದಲ್ಲಿ ಪಾಪಣ್ಣ, ಸಂಸ್ಥೆಯ ಸಿಬ್ಬಂದಿಗಳು ಸಾಧಕರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ ಸಮಾಜ ಸುಧಾರಕರು ಉಪಸ್ಥಿತರಿದ್ದರು.

 

 

 

ಜಿಲ್ಲೆ

ರಾಜ್ಯ

error: Content is protected !!