Saturday, July 20, 2024

ಕಸಾಪ ಜಿಲ್ಲಾ ಅಧ್ಯಕ್ಷ ಅಭ್ಯರ್ಥಿ ಬಸವರಾಜ ಖಾನಪ್ಪನವರ ಬಿರುಸಿನ ಪ್ರಚಾರ

ಯರಗಟ್ಟಿ :  ಪಟ್ಟಣದಲ್ಲಿ ಕಸಪಾ ಜಿಲ್ಲಾ ಅಧ್ಯಕ್ಷ ಅಭ್ಯರ್ಥಿ ಬಸವರಾಜ ಖಾನಪ್ಪನವರ ತಿಂಗಳು  21 ನವೆಂಬರ್ 2021 ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಬೆಳಗಾವಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಚುನಾವಣೆಗೆ ಸ್ಪರ್ಧೆ ಮಾಡಿರುವ ಬಸವರಾಜ ಖಾನಪ್ಪನವರ ಅವರು ಸಾಕಷ್ಟು ಶ್ರಮ ವಹಿಸಿ ಬಿರುಸಿನ ಭರ್ಜರಿ ಪ್ರಚಾರವನ್ನು ಮಾಡುತ್ತಿದ್ದು, ಯರಗಟ್ಟಿ-ಸವದತ್ತಿ ತಾಲ್ಲೂಕಿನ ಬಹುತೇಕ ಸಾಹಿತ್ಯಾಸಕ್ತರು ಹಾಗೂ ಶ್ರೀಗಳಿಗೆ ಭೇಟಿಯಾಗಿ ಪ್ರಚಾರ ನಡೆಸುತ್ತಿದ್ದಾರೆ.

ಇನ್ನೂ ಇದೇ ಸಂದರ್ಭದಲ್ಲಿ ಯರಗಟ್ಟಿಯಲ್ಲಿ ಸಹ ಭರ್ಜರಿ ಕ್ಯಾಂಪೇನ್ ಮಾಡಿ ಸಾಹಿತ್ಯಾಸಕ್ತರು ಹಾಗೂ ಅಜೀವ ಸದಸ್ಯರ ಸಭೆಗಳನ್ನು ನಡೆಸಿದ್ದಾರೆ.

ಇನ್ನೂ ಇವರಿಗೆ ಕರವೇ ಅಧ್ಯಕ್ಷರಾದ ರಫೀಕ ಡಿ. ಕೆ. ಕಸಾಪ ಪದಾಧಿಕಾರಿಗಳು ಸೇರಿದಂತೆ ಹಲವರು ಪದಾಧಿಕಾರಿಗಳು ಹಾಗೂ ಸದಸ್ಯರು ಹಾಗೂ ಪಟ್ಟಣದ ನಿವಾಸಿಗಳು ಇವರಿಗೆ ಸಾಥ್ ಕೊಟ್ಟಿದ್ದಾರೆ.

(ವರದಿ :ಈರಣ್ಣಾ ಹುಲ್ಲೂರ ಯರಗಟ್ಟಿ)

ಜಿಲ್ಲೆ

ರಾಜ್ಯ

error: Content is protected !!