Saturday, July 20, 2024

“ಸಿಂದಗಿಯಲ್ಲಿ ಬಿಜೆಪಿ ಗೆಲುವು ಸಾಧಿಸುವ ವಿಶ್ವಾಸವಿದೆ “:-ಶಾಸಕಿ ಶಶಿಕಲಾ ಜೊಲ್ಲೆ

ಸಿಂದಗಿ : ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ, ಇಂದು ಆಲಮೇಲದಲ್ಲಿ, ಸನ್ಮಾನ್ಯ ಮುಖ್ಯಮಂತ್ರಿಗಳಾದ  ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ  ನಳಿನ್ ಕುಮಾರ್ ಕಟೀಲ್  ಅವರ ನೇತೃತ್ವದಲ್ಲಿ, ನಮ್ಮ ಪಕ್ಷದ ಅಭ್ಯರ್ಥಿ  ರಮೇಶ್ ಭೂಸನೂರ ಅವರ ಪರ ಪ್ರಚಾರಾರ್ಥವಾಗಿ ನಡೆದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ, ಮತದಾರ ಬಾಂಧವರನ್ನು ಉದ್ದೇಶಿಸಿ ಮಾತನಾಡಲಾಯಿತು.

ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಕಾರ್ಯಗಳು ಜನರ ಮನೆ-ಮನ ತಲುಪಿದೆ. ಹೀಗಾಗಿ ಈ ಉಪಚುನಾವಣೆಯಲ್ಲಿ ಮತದಾರ ಬಾಂಧವರು ನಮ್ಮ ಪಕ್ಷದ ವಿಜಯದ ಬಾವುಟ ಹಾರಿಸಲಿದ್ದಾರೆ ಎಂಬ ನಂಬಿಕೆಯಿದೆ.

ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ,  ವಿ. ಸೋಮಣ್ಣ,  ಪ್ರಭು ಚವ್ಹಾಣ,  ಸಿ.ಸಿ ಪಾಟೀಲ,  ಹಾಲಪ್ಪ ಆಚಾರ್, ಲಕ್ಷ್ಮಣ ಸವದಿ, ಸಂಸದ ರಮೇಶ್ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ಎ.ಎಸ್.ಪಾಟೀಲ್ ನಡಹಳ್ಳಿ,  ಬಸವರಾಜ್ ಮತ್ತಿಮೂಡ, ಸೇರಿದಂತೆ ಇತರೆ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!